Kannada NewsKarnataka NewsLatest
*ನರ್ಸ್ ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ವಿಡಿಯೋ ರೆಕಾರ್ಡ್: ಆಸ್ಪತ್ರೆ ಸಿಬ್ಬಂದಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯಲ್ಲಿ ಮಹಿಳಾ ಸಹೋದ್ಯೋಗಿಗಳು, ನರ್ಸ್ ಗಳು ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ಫೋಟೋ ತೆಗೆಯುವುದು, ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಾಗರಬಾವಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿದ್ದ ಕಾಮುಕ, ಲೇಡಿ ನರ್ಸ್ ಗಳು ಬಟ್ಟೆ ಬದಲಿಸುವಾಗ ವಿಡಿಯೋ ಮಾಡುತ್ತಿದ್ದ. ಇದನ್ನು ಗಮನಿಸಿದ ನರ್ಸ್, ಆಸ್ಪತ್ರೆಯ ವೈದ್ಯರಿಗೆ ದೂರು ನೀಡಿದ್ದಳು.
ತಕ್ಷಣ ವೈದ್ಯ ಚೇತನ್ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಯ ಸುಮಂತ್ ಮೊಹಂತಿ ಎಂಬಾತನನ್ನು ಬಂಧಿಸಿದ್ದಾರೆ. ಆತ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಕೆಲಸ ಮಾಡುತ್ತ, ನರ್ಸ್ ಗಳು ಬಟ್ಟೆ ಬದಳಿಸುವಾಗ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.


