Karnataka News

ಬೆಳಗಾವಿಯ ನ್ಯಾಯಾಧೀಶರು, ನ್ಯಾಯವಾದಿಗೆ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಕನ್ನಡದಲ್ಲಿ ವಾದ ಮಂಡಿಸುವ ನ್ಯಾಯವಾದಿಗಳಿಗೆ ಹಾಗೂ ಕನ್ನಡದಲ್ಲಿ ತೀರ್ಪು ನೀಡುವ ನ್ಯಾಯಾಧೀಶರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗುವ ಕನ್ನಡದಲ್ಲಿ ನ್ಯಾಯಾಂಗ ಪ್ರಶಸ್ತಿಗೆ ಬೆಳಗಾವಿಯ ನ್ಯಾಯಾಧೀಶ ಜಿನ್ನಪ್ಪ ಚೌಗುಲಾ ಮತ್ತು ನ್ಯಾಯವಾದಿ ಭೀಮಸೇನ ಬಾಳಪ್ಪ ಬಾಗಿ ಅವರು ಭಾಜನರಾಗಿದ್ದಾರೆ.

ಭೀಮಸೇನ ಬಾಗಿ

ಭಾನುವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಿ. ನರೇಂದರ್, ಕಾನೂನು ಸಚಿವ ಮಾಧುಸ್ವಾಮಿ ಮೊದಲಾದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ನ್ಯಾಯಾಧೀಶ ಜಿನ್ನಪ್ಪ ಚೌಗುಲಾ ಅವರಿಗೆ 2019-20ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಹಾಗೂ ನ್ಯಾಯವಾದಿ ಭೀಮಸೇನ ಬಾಳಪ್ಪ ಬಾಗಿ ಅವರಿಗೆ 2020-21ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.

Home add -Advt

ನ್ಯಾಯಾಂಗದಲ್ಲಿ ಕನ್ನಡ
ನ್ಯಾಯಾಂಗದ ಮುಖ್ಯ ಅಭಿವ್ಯಕ್ತಿಯ ಅಂತಃ ಸಾಕ್ಷಿಯಾದ ನ್ಯಾಯಾಧೀಶರು ಜನರ ಭಾಷೆಯಲ್ಲಿಯೇ ತೀರ್ಪಿನ ಸಾಂತ್ವನ ನೀಡಲಿ ಹಾಗೂ ತಮ್ಮನ್ನು ಪ್ರತನಿಧಿಸುವ ವಕೀಲರು ಜನರ ಭಾಷೆಯಲ್ಲಿಯೇ ವಾದ ಮಂಡಿಸಲಿ ಎನ್ನುವುದು ನೊಂದರವ ಆಸೆ.

 

ಆಡಳಿತದ ಚುಕ್ಕಾಣಿ ಹಿಡಿದಿರುವ ಸರಕಾರದ ಪ್ರಮುಖ ಅಪೇಕ್ಷೆಯೂ ಆಗಿದೆ. ನೆಲದ ಭಾಷೆಯಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಹಾಗೂ ವಾದ ಮಂಡಿಸಿದ ವಕೀಲರು

 

ತಮ್ಮ ಭಾಷಾ ಬದ್ಧತೆಯ ಮೂಲಕ ಸಮಾಜಕ್ಕೆ ರವಾನಿಸುವ ಗಟ್ಟಿ ಸಂದೇಶವನ್ನು ಸರ್ವವ್ಯಾಪಿ ಮಾಡುವ, ನ್ಯಾಯಾಲಯದ ಆವರಣದಲ್ಲಿಯೂ ಕನ್ನಡತನವನ್ನು ಹರಡುವ ಮೂಲಕ ಜನಸ್ನೇಹಿಯಾದ ವಾತಾವರಣ ನಿರ್ಮಿಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ.

ರಮೇಶ ಜಾರಕಿಹೊಳಿ ಕ್ಷಮೆ ಯಾಚಿಸಲಿ: ಪಂಚಮಸಾಲಿ ಮುಖಂಡರ ಆಗ್ರಹ

https://pragati.taskdun.com/ramesh-jarkiholi-should-apologize-for-his-words-to-lakshmi-hebbalkar/

Related Articles

Back to top button