Belagavi NewsElection NewsPolitics

*ನ. 23 ರಂದು ಬೆಳಗಾವಿಯ ಈ ಗ್ರಾಮ ಪಂಚಾಯತಿಗಳಲ್ಲಿ ಉಪ ಚುನಾವಣೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ವಿವಿಧ ಕಾರಣಾಂತರಗಳಿಂದ ತೆರವಾಗಿರುವ 8 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ನ.23 ರಂದು ಉಪಚುನಾವಣೆ ನಡೆಯಲಿದೆ. 

ಚಿಕ್ಕೋಡಿ ತಾಲೂಕಿನ ಕೇರೂರ, ಕರೋಶಿ, ಚಂದೂರ, ನಾಯಿಂಗ್ಲಜ ಮತ್ತು ನೇಜ ಹಾಗೂ ನಿಪ್ಪಾಣಿ ತಾಲೂಕಿನ ನಾಗನೂರ, ಶೆಂಡೂರ ಮತ್ತು ಕೋಗನೊಳಿ ಗ್ರಾಮ ಪಂಚಾಯತಿಗಳಲ್ಲಿ ತೆರವಾದ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

12ರೊಳಗೆ ನಾಮಪತ್ರಗಳ ಸಲ್ಲಿಕೆ, 13ರಂದು ನಾಮಪತ್ರಗಳ ಪರಿಶೀಲನೆ, 15ರಂದು -ಉಮೇದುವಾರಿಕೆ ಹಿಂಪಡೆಯುವಿಕೆ, 23ರಂದು ಮುಂಜಾನೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ, 26ರಂದು ತಾಲೂಕಾ ಕೇಂದ್ರಗಳಲ್ಲಿ ಮತ ಎಣಿಕೆ-ಫಲಿತಾಂಶ ಪ್ರಕಟಗೊಳ್ಳಲಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button