
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಶ್ರಾವಣದ ಮಾಸದ ಮೊದಲ ಸೋಮವಾರ ಗಂಗಾಮಾತೆಯ ಪೂಜಾರಾಧನೆ ಮಾಡಲಾಗಿದೆ.
ಬೆಳಗಾವಿ ನಗರದ ಜೀವನಾಡಿಯಾಗಿರುವ ರಾಕ್ಕಸಕೊಪ್ಪ ಜಲಾಶಯಕ್ಕೆ ಬೆಳಗಾವಿ ಮೇಯರ್ ಸವಿತಾ ಕಾಂಬಳೆ, ಉಪ ಮೇಯರ್ ಆನಂದ ಚವ್ಹಾಣ ಅವರು ಹಾಗೂ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಜಲ ಮಂಡಳಿಯ ಅಧಿಕಾರಳು ಗಂಗಾಮಾತೆಯ ಪೂಜಾರಾಧನೆ ಮಾಡುವ ಮೂಲಕ ಬಾಗಿನ ಅರ್ಪಣೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಪಾಲಿಕೆ ಮೇಯರ್ ಅವರು, ಇಂದು ರಾಕ್ಕಸಕೊಪ್ಪ ಜಲಾಶಯಕ್ಕೆ ಹೋಗಿ ಬಾಗಿನ ಅರ್ಪಣೆ ಮಾಡಲಾಗಿದೆ. ಈ ವರ್ಷ ಉತ್ತಮ ಮಳೆ ಆಗಿರುವುದರಿಂದ ನೀರಿನ ಅಭವಾ ನಗರದಲ್ಲಿ ಆಗುವುದಿಲ್ಲ. ಆದಷ್ಟು ನೀರಿನ ಉಳಿತಾಯ ಮಾಡಿ ಜನರು ಅನುಕೂಲ ಮಾಡಿಕೊಳ್ಳಬೇಕು. ಹೆಚ್ಚು ಮಳೆ ಆಗಿರುವುದರಿಂದ ಕೆಂಪು ನೀರು ಬರುತ್ತಿದೆ. ಹಾಗಾಗಿ ಬೆಳಗಾವಿ ಜನತೆ ಆದಷ್ಟು ಕಾಯಿಸಿ ನೀರು ಕುಡಿಯಿರಿ ಎಂದು ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ