GamesSports

*ಒಂಪಕ್ಸ್ ಪದಕ ವಿಜೇತ ಕುಸ್ತಿ ಪಟು ನಾಲ್ಕು ವರ್ಷ ನಿಷೇಧ*

ಪ್ರಗತಿವಾಹಿನಿ ಸುದ್ದಿ: ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದ ಖ್ಯಾತ ಕುಸ್ತಿ ಪಟುವಿಗೆ ಶಾಕ್ ಎದುರಾಗಿದೆ.  ಬಜರಂಗ್‌ ಪೂನಿಯಾರನ್ನು 4 ವರ್ಷ ಬ್ಯಾನ್ ಮಾಡಲಾಗಿದೆ ಎಂದು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ ಆದೇಶ ಹೊರಡಿಸಿದೆ.

ಡೋಪ್ ಪರೀಕ್ಷೆಗೆ ಮೂತ್ರದ ಮಾದರಿ ನೀಡದ ಕಾರಣಕ್ಕೆ ಏ.23ರಂದು ನಾಡಾ ಬಜರಂಗ್‌ರನ್ನು ಅಮಾನತುಗೊಳಿಸಿತ್ತು. ಬಜರಂಗ್ ಪುನಿಯಾ ಯಾವುದೇ ಸ್ಪರ್ಧಾತ್ಮಕ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಹಾಗಿಲ್ಲ. ಹಾಗೆಯೇ ವಿದೇಶದಲ್ಲಿ ಕೋಚಿಂಗ್ ವೃತ್ತಿಯನ್ನ ಸಹ ಮಾಡುವಂತಿಲ್ಲ ಎಂದು ನಾಡಾ ಸೂಚಿಸಿದೆ.

Home add -Advt

ನಾಡಾ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಹಾಗೂ ಕುಸ್ತಿಪಟುವಿನ ಬದ್ಧತೆ ಪ್ರಶ್ನೆ ಗೆ ಅರ್ಹವಾಗಿದೆ. ಡೋಪಿಂಗ್ ಟೆಸ್ಟ್ ಮಾದರಿ ನೀಡುವಲ್ಲಿ ಪುನಿಯಾ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ನಾಡಾ ಅಭಿಪ್ರಾಯ ಪಟ್ಟಿದೆ. ಪರಿಣಾಮ 4 ವರ್ಷ ನಿಷೇಧ ಹೇರಲಾಗಿದೆ.

Related Articles

Back to top button