Kannada NewsKarnataka NewsLatest

ಅಪಘಾತಕ್ಕೆ ಕರ್ತವ್ಯ ನಿರತ ಎಎಸ್ಐ ಬಲಿ

ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಪಟ್ಟಣದ ಹೊರವಲಯದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಎಎಸ್ಐ ಯಲ್ಲಪ್ಪ ರಾಮಪ್ಪ ತಳವಾರ (58) ಮೃತರಾಗಿದ್ದಾರೆ.

ಬೆಳಗಾವಿ ರಸ್ತೆಯ ಜಿ.ಜಿ.ಚೋಪ್ರಾ ಕಾಲೇಜಿನ ಹತ್ತಿರ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿ ಅವರು ಸಾವಿಗೀಡಾಗಿದ್ದಾರೆ. ಆದರೆ ಅಪಘಾತಪಡಿಸಿದ ವಾಹನ ಯಾವುದು ಎನ್ನುವುದು ಗೊತ್ತಾಗಿಲ್ಲ.

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಶನಿವಾರ ರಾತ್ರಿ ತಮ್ಮ ದ್ವನಿಚಕ್ರ ವಾಹನದಲ್ಲಿ ಅಸುಂಡಿ ಗ್ರಾಮಕ್ಕೆ ತೆರಳುತ್ತಿದ್ದರು. ಇನ್ನು 2 ತಿಂಗಳಲ್ಲಿ ಅವರು ನಿವೃತ್ತರಾಗಲಿದ್ದರು.

ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್ಐ ನಾಗನಗೌಡ ಕಟ್ಟಿಮನಿಗೌಡ ಸ್ಥಳಕ್ಕೆ ಧಾವಿಸಿದ್ದಾರೆ. ತನಿಖೆಯ ನಂತರ ಅಪಘಾತಕ್ಕೆ ನಿಜವಾದ ಕಾರಣ ತಿಳಿಯಬೇಕಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button