Belagavi NewsBelgaum NewsKannada NewsKarnataka NewsNationalPolitics

*ಜ.6 ರಂದು ದಿ. ಬಾಬಾಗೌಡ ಪಾಟೀಲ್ ಜನ್ಮದಿನ ಆಚರಣೆ: ಮಲ್ಲಿಕಾರ್ಜುನ ವಾಲಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೈತರ ಏಳಿಗಾಗಿ ಜೀವನ ಪರ್ಯಂತ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಾಜಿ ಕೇಂದ್ರ ಸಚಿವ ದಿ. ಬಾಬಾಗೌಡ ಪಾಟೀಲ್ ಅವರ ಜನ್ಮ ದಿನಾಚರಣೆಯನ್ನು ಜ‌. 6 ರಂದು ಆಚರಣೆ ಮಾಡಲಿದ್ದೇವೆ ಎಂದು ಅಖಂಡ ಕರ್ನಾಟಕ ರೈತ ಸಂಘಟನೆಯ ರಾಜ್ಯಾದ್ಯಕ್ಷ ಮಲ್ಲಿಕಾರ್ಜುನ ವಾಲಿ ಅವರು ತಿಳಿಸಿದರು.‌

ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ದಿ. ಬಾಬಾಗೌಡ ಪಾಟೀಲ್ ಅವರ 80ನೇ ಜನ್ಮ ದಿನಾಚರಣೆಯನ್ನು ಅವರ ಹುಟ್ಟೂರಾದ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಅವರ ಪ್ರತಿಮೆಯ ಆವರಣದಲ್ಲಿ ಅರ್ಥಪೂರ್ಣವಾಗಿ ಮಾಡಲಾಗುತ್ತದೆ.

ರೈತರ ಸ್ಥಿತಿಗತಿ ಬಗ್ಗೆ ಮತ್ತು ಕೃಷಿ ಉದ್ಯೋಗದ ಮಹತ್ವವನ್ನು ಬಿತ್ತರಿಸುವುದು ಅತೀ ಅವಶ್ಯವಾಗಿದೆ. ಇಂಥ ಹಲವಾರು ರೈತರ ಸಮಸ್ಯೆಗಳಾದ ಬೆಳೆ ಪರಿಹಾರವನ್ನು ಬಿಡುಗಡೆ ಮಾಡುವ ಕುರಿತು ಒತ್ತಾಯಿಸುವುದು ಮತ್ತು ಕಬ್ಬಿನ ದರವನ್ನು ಹೆಚ್ಚಿಗೆ ಮಾಡುವ ಕುರಿತು ಮತ್ತು ರೈತ ಯುವಕರ, ಅಲ್ಲದೇ ಕೃಷಿ ಕಾರ್ಮಿಕರ ಜೀವನಮಟ್ಟ ಸುಧಾರಣೆಗೆ ಬೇಕಾಗುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಈ ಸಭೆಯನ್ನು ಇಟ್ಟುಕೊಳ್ಳಲಾಗಿದೆ. ಕಾರಣ ಜಿಲ್ಲೆಯ ರೈತ ಹೋರಾಟಗಾರರು ಮತ್ತು ರೈತಪರ ಚಿಂತಕರು. ರೈತ ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು ಎಂದು ತಿಳಿಸಿದರು.‌

ಸಾಧಕರಿಗೆ ಸನ್ಮಾನ: ಧರ್ಮರಾಜ ಗೌಡರ್

ಈ ವೇಳೆ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘಟನೆಯ ಬೆಳಗಾವಿ ಯುವ ಘಟಕದ ಅಧ್ಯಕ್ಷ ಧರ್ಮರಾಜ ಗೌಡರ್ ಅವರು, ದಿ. ಬಾಬಾಗೌಡಾ ಪಾಟೀಲ್ ಅವರ ಜನ್ಮ ದಿನಾಚರಣೆಯು 6 ರಂದು ನಡೆಯಲಿದ್ದು, ಸಾಧಕರಿಗೆ ಸನ್ಮಾನ ಮಾಡಲಾಗುವುದು‌. ಹಾಗಾಗಿ ಅವರ ಹುಟ್ಟು ಹಬ್ಬದ ದಿನ ಕೆಲ ಸಾಧಕರನ್ನು ಗುರುತು ಮಾಡಿ ಸನ್ಮಾನ ಮಾಡಲಿದ್ದೇವೆ. ಜೊತೆಗೆ ಅಂದು ರೈತರು ಎಲ್ಲರೂ ಸೇರಿ ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ಹೇಳಿದರು.

ಈ ವೇಳೆ ಮಲ್ಲಿಕಾರ್ಜುನ ಹುಂಬಿ, ಬಸವರಾಜ ಡೊಂಗರಗಾಂವಿ, ಬಸವರಾಜ ಹಣ್ಣಿಕೇರಿ ಬಸವರಾಜ ಹಿತ್ತಲಮನಿ ಉಪಸ್ಥಿತರಿದ್ದರು.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button