Belagavi NewsBelgaum News

*ಆನ್‌ಲೈನ್ ವಂಚನೆ: ಸಾರ್ವಜನಿಕರ ಗಮನಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿಶು ಅಭಿವೃದ್ಧಿ ಯೋಜನೆ ನಿಪ್ಪಾಣಿ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ಬೇರೆ ಬೇರೆ ಮೊಬೈಲ್ ನಂಬರ್‌ಗಳಿಂದ ದೂರವಾಣಿ ಮುಖಾಂತರ ಕರೆ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳಾದ ಪೋಷಣ ಅಭಿಯಾನ ಹಾಗೂ ಮಾತೃವಂದನ ಯೋಜನೆಗೆ ಸಂಬಂಧಿಸಿದಂತೆ, ಕಚೇರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹೆಸರನ್ನು ಹೇಳಿಕೊಂಡು ಮಾಹಿತಿಯನ್ನು ಕೇಳಿ OTP ಹಾಗೂ Phone Pay Link ಕೇಳಿ ಬ್ಯಾಂಕ್ ಖಾತೆಗಳಿಂದ ಹಣ ವಂಚನೆ ಮಾಡಲಾಗುತ್ತಿದೆ.

ಎಲ್ಲಾ ಫಲಾನುಭವಿಗಳಿಗೆ ತಿಳಿಸುವುದೇನೆಂದರೆ ಬೆಳಗಾವಿ ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ, ಯಾವುದೇ OTP ಹಾಗೂ Phone Pay ಲಿಂಕ್‌ನ್ನು ಕಳುಹಿಸುತ್ತಿಲ್ಲ. ಫಲಾನುಭವಿಗಳು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ನಿಪ್ಪಾಣಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button