Kannada NewsKarnataka NewsLatest

*ಆನ್ ಲೈನ್ ವಂಚಕರಿಂದ 1.99 ಲಕ್ಷ ಹಣ ಕಳೆದುಕೊಂಡ MLC ಪುತ್ರ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಇತ್ತೀಚಿನದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪುತ್ರ ಆನ್ ಲೈನ್ ವಂಚಕರಿಂದ 1.99 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಹೆಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಹಣ ಡ್ರಾ ಮಾಡಲೆಂದು ಎಟಿಎಂ ಗೆ ಹೋಗಿದ್ದಾರೆ. ಈ ವೇಳೆ ಹಣ ಬರುತ್ತಿಲ್ಲ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಬ್ಯಾಂಕ್ ಖತೆ ಬಗ್ಗೆ ವಿವರ ಪಡೆದು ಅವರ ಖಾತೆಯಿಂದ 1.99 ಲಕ್ಷ ಹಣ ದೋಚಿದ್ದಾನೆ.

ಹಣ ಡ್ರಾ ಆಗಿರುವುದು ಗೊತ್ತಾಗುತ್ತಿದ್ದಂತೆ ತಕ್ಷಣ ಸೈಬರ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button