Kannada NewsKarnataka News

ಗ್ರಾಮದ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದ ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಬೋರಗಾಂವ  – ಚಾರಿತ್ರ್ಯ ಚರ್ಕವರ್ತಿ ಮುನಿಶ್ರೀ ಶಾಂತಿಸಾಗರ ಮಹಾರಾಜರ ಪುಣ್ಯಭೂಮಿಯಾದ ಭೋಜ ಗ್ರಾಮ ಸಮಗ್ರ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಸರ್ಕಾರದ ವಿವಿಧ ಇಲಾಖೆಗಳ ಅನುದಾನಡಿ ೭ ಕೋಟಿ ೩೨ ಲಕ್ಷ ರೂ ಅನುದಾನ ಮಂಜೂರು ಮಾಡಲಾಗಿತ್ತು.

ರಸ್ತೆ ಸುಧಾರಣೆ, ಅಗಲಿಕರಣ ಮತ್ತು ಡಾಂಬರಿಕರಣ, ನೆಲಹಾಸು ಕಾಮಗಾರಿ, ಸಿ.ಸಿ.ರಸ್ತೆ, ಎಸ್.ಸಿ.ಕಾಲನಿಯಲ್ಲಿ ರಸ್ತೆ ಅಭಿವೃದ್ಧಿ, ಶಾಂತಿಸಾಗರ ಸ್ಮಾರಕದಲ್ಲಿ ನೆಲಹಾಸು ಹಾಗೂ ವಿದ್ಯುತ್ ಕಂಬಗಳ ಅಳವಡಿಕೆ ಹಾಗೂ ಮುಖ್ಯ ರಸ್ತೆ ಡಾಂಬರಿಕರಣ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಿ ಗ್ರಾಮಸ್ಥರಿಗೆ ನಿಡಿದ ಭರವಸೆ ಪೂರ್ಣಗೊಳಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸಮೀಪದ ಭೋಜ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ ಸೇರಿದಂತೆ ಶಾಂತಿಸಾಗರ ಮಾರ್ಗ ಹಾಗೂ ಶಾಂತಿಸಾಗರಮ್ ತಿರ್ಥ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭೋಜ ಗ್ರಾಮದಲ್ಲಿ ಶಾಂತಿಸಾಗರ ಮಹಾರಾಜರ ಜನ್ಮಭೂಮಿಯನ್ನು ತಿರ್ಥಸ್ಥಾನವನ್ನಾಗಿ ಮಾಡುವ  ಪ್ರಜ್ಞಾಸಾಗರ ಮಹಾರಾಜರ ಕನಸಿತ್ತು.ಇವತ್ತು ಅಭಿವೃದ್ಧಿ ಕಾಮರಿಗಳೊಂದಿಗೆ ಕನಸು ನನಸಾಗಿದೆ. ಭಕ್ತಾದಿಗಳ ಅನುಕೂಲಕ್ಕೆ ಎಲ್ಲ ಕಾರ್ಯವಾಗಿದೆ. ಎಲ್ಲರ ಸಹಕಾರದಿಂದ ಭೋಜ ಗ್ರಾಮವನ್ನು ಅಭಿವೃದ್ಧಿಯಲ್ಲಿ ಮಾದರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನಿಡಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಭೋಜ ಗ್ರಾಮದ ಪಂಚಕಲ್ಯಾಣ ಮಹೋತ್ಸವವನ್ನು ದೇಶದಲ್ಲಿ ಮಾದರಿ ಮಾಡುವ ಉದ್ದೇಶವಿದೆ.  ಕೊರೋನಾದಿಂದ ಕಾರ್ಯಕ್ರಮ ಮುಂದೂಡಲಾಗಿದೆ. ಪಂಚಕಲ್ಯಾಣ ಮಹೋತ್ಸವಕ್ಕೆ ಎಲ್ಲ ಸಹಕಾರ ನಿಡುಲಾಗುವದು. ಮಹಾಮಾರಿ ಕೊರೋನಾ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಿದ್ದು, ಕೊರೋನಾ ವಾರಿಯರ‍್ಸಗೆ ಸಹಕಾರ ನೀಡಿ ಎಂದು ಕರೆ ನೀಡಿದರು.
ಪವನ ಪಾಟೀಲ, ಪ್ರಭಾಕರ ದೇಶಪಾಂಡೆ, ಅಪ್ಪಾಸಾಬ ಪಾಟೀಲ, ಅದಗೊಂಡಾ ಪಾಟೀಲ, ಪ್ರಶಾಂತ ಪಾಟೀಲ, ಭರತ ಕುಪಾನಟ್ಟೆ, ಅಣಾಸೋ ಪಾಟೀಲ, ಅಜೀತ ಮಾಳಿ, ವಿನಯ ಸಂಕಪಾಳ, ಸಂಜಯ ಸಂಕಪಾಳ, ಪ್ರಕಾಶ ವಡ್ಡರ, ವಿರೇಂದ್ರ ಬುರಜಿ, ತಾತ್ಯಾಸಾಹೇಬ ಪಾಟೀಲ, ಸಂಜಯ ಕಮತೆ, ದಾದು ವಡರ, ಸುಭಾಷ ನೇಜಕರ, ಲೋಕೋಪಯೋಗಿ ಇಲಾಖೆ ಅಭಿಯಂತ ಬಿ.ಬಿ.ಬೇಡಕಿಹಾಳೆ, ಸುನೀಲ ಬೇಡಕಿಹಾಳೆ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button