Kannada NewsKarnataka NewsLatest

ಕಡಾಡಿ ಕಾರಿನ ಮೇಲಿನ ದಾಳಿಗೆ ಆಕ್ರೋಶ: ತುರ್ತು ಸಭೆ ಸೇರಿ ಚರ್ಚಿಸಿದ BJP ನಾಯಕರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿನ ಮೇಲೆ ಶುಕ್ರವಾರ ಘಟಪ್ರಭಾದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಂಬಲಿಗರೆನ್ನಲಾದ ಗುಂಪು ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಶನಿವಾರ ಬೆಳಗ್ಗೆ ತುರ್ತು ಸಭೆ ನಡೆಸಿದರು.

ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ನಾಯಕರು ಸುಮಾರು 3 ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚಿಸಿದರು. ಸತೀಶ ಜಾರಕಿಹೊಳಿ ಅವರ ಹಿಂದೂ ಕುರಿತ ಹೇಳಿಕೆ ಮತ್ತು ನಂತರದ ಬೆಳವಣಿಗೆಗಳ ಕುರಿತು ಚರ್ಚಿಸಿ, ಮುಗ್ದ ಜನರನ್ನು ಬಳಸಿಕೊಂಡು ಈ ರೀತಿ ದಾಳಿ ಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ. ಇದೊಂದು ಗಂಭೀರ ಬೆಳವಣಿಗೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲರೂ ಒಗ್ಗಟ್ಟಾಗಿದ್ದು ಮುಂದಿನ ಬೆಳವಣಿಗೆಗಳನ್ನು ಎದುರಿಸಲು ಸಜ್ಜಾಗಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,  ಸಂಸದ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಮಹಾಂತೇಶ ದೊಡ್ಡಗೌಡರ್, ಮಾಜಿ ಶಾಸಕರಾದ ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಅರವಿಂದ ಪಾಟೀಲ, ಯಮಕನಮರಡಿಯ ಮಾರುತಿ ಅಷ್ಟಗಿ ಮೊದಲಾದವರಿದ್ದರು.

ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ, ಹಾಗೂ ಅವರ ಬೆೆಂಬಲಿಗರಾದ ಮಹೇೇಶ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ ಸಭೆಗೆ ಬಂದಿರಲಿಲ್ಲ. ಶಾಸಕ ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ಪಿ.ರಾಜೀವ ಸಹ ಸಭೆಯಲ್ಲಿರಲಿಲ್ಲ. ಸಂಸದ ಅಣ್ಣಾ ಸಾಹೇಬ ಜೊಲ್ಲೆ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಸಹ ಪೂರ್ವಯೋಜಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಗೈರಾಗಿದ್ದರು.

ಸಭೆಯ ನಂತರ ಮಾತನಾಡಿದ ಈರಣ್ಣ ಕಡಾಡಿ, ಘಟನೆಯ ಸುದ್ದಿ ಕೇಳಿದ ಎಲ್ಲ ನಾಯಕರು ಗಾಭರಿಯಿಂದ ನನಗೆ ಫೋನ್ ಮಾಡಿ ಭೇಟಿಯಾಗಲು ಮನೆಗೆ ಬರುವುದಾಗಿ ತಿಳಿಸಿದರು. ಅವರೆಲ್ಲರೂ ನಮ್ಮೂರಿಗೆ ಬರುವ ಬದಲು ನಾನೇ ಬಂದು ಎಲ್ಲರಿಗೂ ನಡೆದ ಮಾಹಿತಿ ನೀಡೋಣ ಎಂದುಕೊಂಡು ಇಲ್ಲಿ ಬಂದಿದ್ದೇನೆ. ಎಲ್ಲರಿಗೂ ಘಟನೆಯ ವಿವರ ನೀಡಿದ್ದೇನೆ ಎಂದರು.

ಈ ಕುರಿತು ಹೈಕಮಾಂಡ್ ಗಮನಕ್ಕೆ ತರುತ್ತೀರಾ ಎನ್ನುವ ಪ್ರಶ್ನೆಗೆ, ಎಲ್ಲವೂ ಈಗಾಗಲೆ ಹೈಕಮಾಂಡ್ ಗಮನದಲ್ಲಿದೆ ಎಂದರು.

ಲಕ್ಷ್ಮಣ ಸವದಿ ಮಾತನಾಡಿ, ಇದು ಸಭೆಯೇ ಅಲ್ಲ. ನಮ್ಮ ಪಕ್ಷದ ಹಿರಿಯ ನಾಯಕರಾಗಿರುವ ಈರಣ್ಣ ಕಡಾಡಿಗೆ ಸಾಂತ್ವನ ಹೇಳುವುದಕ್ಕಾಗಿ ನಾವೆಲ್ಲ ಇಲ್ಲಿ ಸೇರಿದ್ದೆವು. ಘಟನೆಯ ಬಗ್ಗೆ ಅಷ್ಟೆ ಚರ್ಚಿಸಿದ್ದೇವೆ ಎಂದರು.

ನನ್ನ ತಂದೆಯನ್ನು ಪೊಲೀಸರು ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದಾರೆ: ಬಸನಗೌಡ ಪುತ್ರಿ ಆಕ್ರೋಶ

https://pragati.taskdun.com/latest/rohini-patilreactionbasanagouda-deathbelagavi/

ಮಾಜಿ ಪ್ರಧಾನಿಯವರಿಗೆ ಸರ್ಕಾರದಿಂದ ಕಾಟಾಚಾರಕ್ಕೆ ಕರೆ; ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ ಹೇಗೆ?; JDS ಆಕ್ರೋಶ

https://pragati.taskdun.com/politics/h-d-devegowdakempegowda-statuejdstweet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button