Latest

ಕರ್ನಾಟಕದ 8 ಜನರಿಗೆ ಪದ್ಮ ಪ್ರಶಸ್ತಿ; ಪೇಜಾವರ ಶ್ರೀಗೆ ಪದ್ಮ ವಿಭೂಷಣ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಈ ಸಾಲಿನ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. 7 ಜನರಿಗೆ ಪದ್ಮವಿಭೂಷಣ, 16 ಜನರಿಗೆ ಪದ್ಮ ಭೂಷಣ ಹಾಗೂ 118 ಜನರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ತುಳಸಿ ಗೌಡ, ವಿಜಯ ಸಂಕೇಶ್ವರ, ಎಂ.ಪಿ.ಗಣೇಶ, ಬೆಂಗಳೂರು ಗಂಗಾಧರ, ಭರತ್ ಘೋಯೆಂಕಾ, ಕೆ.ವಿ.ಸಂಪತ್ ಕುಮಾರ ಹಾಗೂ ವಿದೂಷಿ ಜಯಲಕ್ಷ್ಮಿ ಕೆ.ಎಸ್. (ಜಂಟಿಯಾಗಿ), ಹರೇಕಲ್ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಜಾರ್ಜ್  ಫರ್ನಾಂಡೀಸ್, ಅರುಣ ಜ್ಯೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಅವರಿಗೂ ಮರಣೋತ್ತರವಾಗಿ ಪದ್ಮ ವಿಭೂಷಣ ಘೋಷಿಸಲಾಗಿದೆ.

Home add -Advt

Related Articles

Back to top button