*ಪುಣೆಯಲ್ಲಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರಿಗೆ ಭವ್ಯ ಸತ್ಕಾರ*
ಪ್ರಗತಿವಾಹಿನಿ ಸುದ್ದಿ: ಕೆ.ಎಲ್.ಇ. ಸೊಸೈಟಿಯ ಕಾರ್ಯಾಧ್ಯಕ್ಷ ಹಾಗೂ ಹಿರಿಯ ಶಿಕ್ಷಣತಜ್ಞ ಪದ್ಮಶ್ರೀ ಡಾ. ಪ್ರಭಾಕರ ಬಸವಪ್ರಭು ಕೋರೆ ಅವರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ, ಸಂಪೂರ್ಣ ಲಿಂಗಾಯತ ಸಮಾಜದ ವತಿಯಿಂದ ಪುಣೆಯಲ್ಲಿ ಭವ್ಯ ಸತ್ಕಾರ ಸಮಾರಂಭ ಆಯೋಜಿಸಲಾಗಿದೆ.
ಲಿಂಗಾಯತ ಸಂಘರ್ಷ ಸಮಿತಿ ಹಾಗೂ ವೀರಶೈವ ಇಂಟರ್‌ನ್ಯಾಶನಲ್ ಅಸೋಸಿಯೇಷನ್ ವತಿಯಿಂದ “ಸತ್ಕಾರ ಸಮಾರಂಭ ಸೋಹಳಾ–2026” ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಗುರುವಾರ, ಸೆಪ್ಟೆಂಬರ್ 3ರಂದು ಸಂಜೆ 4.30ಕ್ಕೆ ಪುಣೆಯ ಬಿಬವೆವಾಡಿಯ ಸ್ವಾಮಿ ವಿವೇಕಾನಂದ ಪುತ್ಥಳಿಯ ಬಳಿ ಇರುವ ಲೋಕಶಾಹೀರ್ ಅಣ್ಣಾಭಾವು ಸಾಠೆ ಸಭಾಗೃಹದಲ್ಲಿ ನಡೆಯಲಿದೆ.
ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ ಸತ್ಕಾರವನ್ನು ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವರಾದ ಪದ್ಮವಿಭೂಷ ಶರದ್‌ಚಂದ್ರ ಪವಾರ್ ಅವರ ಶುಭ ಹಸ್ತದಿಂದ ನೆರವೇರಿಸಲಾಗುವುದು.
ಸಮಾರಂಭದಲ್ಲಿ ಹ.ಭ.ಪ. ಸದ್ಗುರು ಗಹಿನೀನಾಥ ಜ್ಞಾನೇಶ್ವರ ಮಹಾರಾಜ ಔಸೇಕರ, ಸಹ-ಅಧ್ಯಕ್ಷರು, ಶ್ರೀ ವಿಠ್ಠಲ-ರುಕ್ಮಿಣಿ ಮಂದಿರ ಸಮಿತಿ, ಪಂಢರಪುರ ಹಾಗೂ ಮಾಜಿ ಸಿಕ್ಕಿಂ ರಾಜ್ಯಪಾಲ ಶ್ರೀನಿವಾಸ ದಾದಾಸಾಹೇಬ ಪಾಟೀಲ ಪ್ರಮುಖ ಉಪಸ್ಥಿತರಾಗಿರುವರು.
ಈ ಸಂದರ್ಭದಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ವಲಸೆ ಹೋಗಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಮಾಜದ ಗಣ್ಯರನ್ನು ಗುರುತಿಸಿ ‘ಅಗ್ರಗಣ್ಯ ಸಮಾಜಭೂಷಣ’ ಗೌರವ ನೀಡಲಾಗುವುದು. ಅಲ್ಲದೆ ಲಿಂಗಾಯತ ಸಮಾಜ ಗೌರವ’ ಹಾಗೂ ‘ಸ್ಮೃತಿ ಗೌರವ ಸ್ಮರಣಿಕೆಗಳನ್ನು ವಿತರಿಸಲಾಗುವುದು.
ಪುಣೆ ಜಿಲ್ಲೆಯ 50ಕ್ಕೂ ಹೆಚ್ಚು ಲಿಂಗಾಯತ–ವೀರಶೈವ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಮಾರಂಭ ನಡೆಯಲಿದ್ದು, ಸಮಸ್ತ ವೀರಶೈವ–ಲಿಂಗಾಯತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಸಮಾರಂಭದ ನಿಮಂತ್ರಕರಾಗಿ ವೀರಶೈವ ಇಂಟರ್‌ನ್ಯಾಶನಲ್ ಅಸೋಸಿಯೇಷನ್ ಅಧ್ಯಕ್ಷ ಓಂಪ್ರಕಾಶ್ ದಾದಾಪ್ಪಾ ತಥಾ ಕಾಕಾ ಕೋಯಟೆ ಹಾಗೂ ಲಿಂಗಾಯತ ಸಂಘರ್ಷ ಸಮಿತಿ ಅಧ್ಯಕ್ಷ ಸುನಿಲ್ ನಾಮದೇವರಾವ್ ರುಕಾರಿ ಅವರದ್ದಾರೆ.




