*ಶಿರಸಿಯ ಯೋಗಮಂದಿರದಲ್ಲಿ ದಿ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ: ವಿವಿಧ ಪುಸ್ತಕ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಅಭಿಮಾನ ಸಾಂಸ್ಕೃತಿಕ ವೇದಿಕೆ,ಶಿರಸಿ ಯಿಂದ ಶಿರಸಿಯ ಯೋಗಮಂದಿರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ರಾಷ್ಟ್ರೀಯ ನಾಯಕರೂ ಆಗಿದ್ದ ದಿ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಸರಳವಾಗಿ ಆಚರಿಸಲ್ಪಟ್ಟಿತು.
ವೇದಿಕೆಯ ಅಧ್ಯಕ್ಷರಾದ ವಿ ಎನ್ ಭಾಗ್ವತ ಬರಬಳ್ಳಿಯವರು ಸ್ವಾಗತಿಸಿ ಪ್ರಸ್ಥಾವಿಕ ಮಾತನಾಡಿದರು. 1990 ರಲ್ಲಿ ಒಂದು ಪತ್ರಿಕೆಯಲ್ಲಿ ” ರಾಮಕೃಷ್ಣ ಹೆಗಡೆಯವರು ಮೂರಾರ್ಜಿಯವರ ಬದಲು ಪ್ರಧಾನಿಯಾಗಿದ್ದರೆ ಸರಕಾರ ಅವಧಿ ಪೂರ್ಣ ಉಳಿಯುತ್ತಿತ್ತು” ಎಂದು ಇರುವುದನ್ನು ನೋಡಿದಾಗ, ಹೆಗಡೆಯವರ ಜನ್ಮ ದಿನ ಆಚರಿಸಲು ನಿರ್ಧರಿಸಿದೆ”” ಅಂದಿನಿಂದ ಇಂದಿನವರೆಗೂ ಅಭಿಮಾನಿಗಳ ಸಹಕಾರದಿಂದ ನಡೆಯುತ್ತಲಿದೆ ಎಂದರು.
ಹೆಗಡೆಯವರ ಆಡಳಿತದ ಸಮಯದಲ್ಲಿ ಪರಸ್ಪರ ಸಂಬಂಧ ಉತ್ತಮವಾಗಿತ್ತು. ಈಗ ಆ ವಾತಾವರಣವೇ ಇಲ್ಲ. ಹೆಗಡೆಯವರ ಪ್ರಭಾ ವಲಯವೇ ಹಾಗಿತ್ತು . ಹೆಗಡೆಯವರಂಥಹ ತತ್ವನಿಷ್ಟ ರಾಜಕಾರಣಿಗಳು ಮತ್ತೆ ತಯಾರಾಗಬೇಕು ಎಂದರು.
ಸಮಾಜಮುಖಿ ಭಾಗ- 2 ಪುಸ್ತಕವನ್ನು ಕೆ ಎನ್ ಹೊಸ್ಮನಿ ಯವರು ಲೋಕಾರ್ಪಣೆ ಮಾಡಿದರು. ಹೆಗಡೆಯವರನ್ನು ವಿನೋಭಾ ಬಾವೆಯವರು ಸಂಸ್ಕಾರಯುತನನ್ನಾಗಿ ಮಾಡಿದರು. ಹೆಗಡೆಯವರು ಮಾತನಾಡಿದರೆ ವಿರೋಧಿಗಳೂ ತಲೆಯಾಡಿಸುತ್ತಿದ್ದರು. ಅವರದ್ದು ಜನರನ್ನು ಮೆಚ್ಚಿಸುವದಕ್ಕಾಗಿ ಮಾಡುವ ಸೇವೆ ಅಲ್ಲವಾಗಿತ್ತು. ಜನಪರವಾದ ಕಾರ್ಯಕ್ರಮಗಳನ್ನೇ ಮಾಡುತ್ತಿದ್ದರು. ಮುಖ್ಯ ಮಂತ್ರಿಯಾದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದಂತಹ ಶುದ್ಧಹಸ್ತರು ಅವರು. ಬ್ರಷ್ಟಾಚಾರ ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದವರು ಹೆಗಡೆ. ಕೆಎಸ್ ನಂತಹ ನೌಕರಿಯು ನ್ಯಾಯಯುತವಾಗಿ ಹೆಗಡೆಯವರ ಅವಧಿಯಲ್ಲಿ ದೊರಕುತ್ತಿದ್ದವು ಎಂದು ಉದಾಹರಣೆ ಸಹಿತ ಹೇಳಿದರು.
ವಿ ಎನ್ ಭಾಗ್ವತರ ” ಬಾವಲಿ ಮತ್ತು ಇತರ ಕತೆಗಳು “” ಪಸ್ತಕ ಬಿಡುಗಡೆ ಮಾಡಿದವರು ನಿವ್ರತ್ತ ಪ್ರಾಂಶುಪಾಲರಾದ ಆರ್ ಡಿ ಹೆಗಡೆ ಆಲ್ಮನೆಯವರು. ಹೆಗಡೆಯವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದಾಗ, ಜನರು ಪ್ರತಿಭಟನೆ ಮಾಡಲಿಲ್ಲ. ರಾಜಿನಾಮೆ ನೀಡದಂತೆ ಒತ್ತಾಯಿಸಬೇಕಿತ್ತು ಎಂದರು.
ಬಾವಲಿ ಮತ್ತು ಇತರ ಕತೆಗಳು ಮಕ್ಕಳಿಗೆ ಪಾಲಕರು ಓದಿಹೇಳಬೇಕಾದ ಪುಸ್ತಕ. ಕಥೆಗಳಲ್ಲಿ ಹೊಡೆದಾಟ,ಬಡಿದಾಟ, ಕೂಗಾಟಗಳಿಲ್ಲ. ನೈತಿಕ ವಿಷಯಗಳಿಂದಲೇ ತುಂಬಿವೆ. ಓದಬೇಕಾದ ಪುಸ್ತಕ, ಹೇಳಬೇಕಾದುದ್ದನ್ನು ನೇರವಾಗಿ ಹೇಳಿದ್ದಾರೆ ಲೇಖಕರು ಎಂದರು.
ಉತ್ತರ ಕನ್ನಡ ಜಿಲ್ಲೆಗೆ ಹೆಗಡೆಯವರು ಸಾಕಷ್ಟು ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಹೆಗಡೆಯವರು ಹಿಂದೆ ಅಧಿಕಾರದಲ್ಲಿದ್ದಾಗ ಮಂಜೂರಿಯಾದ ಅನೇಕ ಕೆಲಸಗಳು ಈಗಲೂ ನಡೆಯುತ್ತಲಿವೆ. ಆದರೆ ಹೆಗಡೆಯವರಿಗೆ ಉತ್ತರ ಕನ್ನಡದವರು ಬೆಂಬಲಿಸಿದ್ದು ಕಡಿಮೆ ಎಂದವರಯ ಹಿರಿಯ ವಕೀಲರಾದ ಆರ್ ಜಿ ಹೆಗಡೆ, ಕೇರಿಮನೆಯವರು. ತಮ್ಮ ತಂದೆಯವರು ಮತ್ತು ಹೆಗಡೆಯವರಿಗೆ ಉತ್ತಮ ಸಂಬಂಧ ಇತ್ತು. ತುಂಬಾ ಬಡತನದಿಂದ ಮೇಲೆ ಬಂದವರು ಹೆಗಡೆಯವರು. ಅವರಿಂದ ಮೇಲೆ ಬಂದವರೇ ಅವರನ್ನು ಬೆಂಬಲಿಸಲಿಲ್ಲ ಎಂದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಬ್ರಿಟಿಷರಿಂದ ಬಹಳ ನಷ್ಟ ಅನುಭವಿಸಿದ್ದು ಹೆಗಡೆಯವರ ಕುಟುಂಬ. ಮೋಟಿನ್ಸರ ಹೆಗಡೆಯವರು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯನ್ನಾಗಿ ಮಾಡಿದ ನಂತರ ಹೆಗಡೆಯವರ ಜೀವನ ಬದಲಾಯಿತು. ಮುಖ್ಯಮಂತ್ರಿಯಿದ್ದಾಗ ತಮ್ಮ ಮನೆಗೆ ಬಂದ ಸಂದರ್ಬದಲ್ಲಿ ಬೆಂಗಾವಲು ಪಡೆಯಿಲ್ಲದೆ ಸಾಮಾನ್ಯರಂತೆ ಹೆಗಡೆಯವರು ಉಳಿದುಹೋದದ್ದನ್ನು ನೆನಪಿಸಿದರು. ಅವರ ಕೊನೆಯ ದಿವಸದಲ್ಲಿ ಎಸ್ ಎಂ ಕ್ರಷ್ಣರವರು ಮುಖ್ಯ ಮಂತ್ರಿಯಾಗಿದ್ದವರು ಧನ ಸಹಾಯ ಮಾಡಿದರು ಎಂದರು.
ಉಪನ್ಯಾಸಕಿ ಮತ್ತು ಲೇಖಕಿ ಶ್ರೀಮತಿ ಎನ್ ಆರ್ ರೂಪಶ್ರೀಯವರು ತಾನು ಹೆಗಡೆಯವರ ಸಂಬಂಧಿ ಎನ್ನಲು ಸಂತೋಷವಾಗುತ್ತದೆ. ಮೈಸೂರಲ್ಲು ಹೆಗಡೆಯವರ ಊರಿವನಳು ಎಂದಾಗ ಗೌರವದಿಂದ ಕಾಣುತ್ತಾರೆ. ಅವರನ್ನು ಉತ್ತರ ಕನ್ನಡದವರಿಗಿಂತ ಉತ್ತರ ಕರ್ನಾಟಕದವರು ಹೆಚ್ಚು ಬೆಂಬಲಿಸಿದರು ಎಂದರು. ಮಾನವತೆಯುಳ್ಳ, ಬ್ರಷ್ಟಾಚಾರ ವಿರೋಧಿಸುವ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಜಾತಿ ಧರ್ಮಗಳ ಬೇಧ ಮಾಡದೆಯೆ ನಿಜವಾದ ಬಡವರನ್ನು ಗುರುತಿಸುವವರಾಗಿದ್ದರು. ಅವರಂಥಹ ನಾಯಕರು ಮತ್ತೆ ತಯಾರಾಗಬೇಕು ಎಂದರು. ಉತ್ತಮ ಹಣಕಾಸು ತಜ್ಞರಾಗಿದ್ದು ಹನ್ನೆರಡು ಬಾರಿ ಹಣಕಾಸು ಅಯವ್ಯಯ ಪತ್ರ ಮಂಡಿಸರಿದರು ಎಂದರು. ವಿ ಎನ್ ಭಾಗ್ವತರು ಉತ್ತಮ ಕಾರ್ಯ ಮಾಡುತ್ತಲಿದ್ದಾರೆ. ಎಲ್ಲ ಸಭೆಗಳಲ್ಲೂ ಸಂಘಟಕರು ವೇದಿಕೆಯಲ್ಲಿ ಕುಳಿತಿರುತ್ತಾರೆ. ಆದರೆ ವಿ ಎನ್ ಭಾಗ್ವತರು ಸಭಿಕರ ಸ್ಥಾನದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿರುವುದು ಶ್ಲಾಘನೀಯ ವಿಷಯ ಎಂದರು.
ತಾಳಮದ್ದಳೆ ರಾಜ್ಯಮಟ್ಟದ ಸ್ಪರ್ಧಾ ಮತ್ತು ರಾಜ್ಯ ಮಟ್ಟದ ಲೇಖನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶತಮಾನೋತ್ಸವದ ಸಂದರ್ಭದಲ್ಲಿ ಲೇಖನ ಕಳುಹಿಸಿದವರಿಗೆ ಅಭಿನಂದನಾ ಪತ್ರ ನೀಡಲಾಯಿತು.
ಅಧ್ಯಕ್ಷರಾದ ಡಾ ಆರ್ ಎನ್ ಹೆಗಡೆ ಬಂಡಿಮನೆಯವರು ಹೆಗಡೆಯವರೊಂದಿಗಿನ ತಮ್ಮ ಕುಟುಂಬದ ಸಂಬಂಧವನ್ನು ಹೇಳಿ, ಸಮಾರೋಪ ಭಾಷಣ ಮಾಡಿದರು. ಕೆವಿಜಿ ನಿವ್ರತ್ತ ಮೆನೇಜರರಾದ ಜಿ ವಿ ಹೆಗಡೆಯವರು, ಚಿನ್ಮಯ ಭಾಗ್ವತ ವಕೀಲರುಗಳು ಸಹಕರಿಸಿದರು. ವಿ ಬಾಲಚಂದ್ರ ಭಟ್ಟ ಕರಸುಳ್ಳಿಯವರು ನಿರ್ವಹಿಸಿದರು. ಕೊನೆಯಲ್ಲಿ ಎಂ ಎನ್ ಹೆಗಡೆ ನಿವೃತ್ತ ಪ್ರಾಂಶುಪಾಲರು ವಂದಿಸಿದರು.




