Latest

ಪದ್ಮಶ್ರೀ ಪುರಸ್ಕೃತೆ ಕಲಾವಿದೆಗೆ ಐಸಿಯುನಲ್ಲಿ ಡ್ಯಾನ್ಸ್ ಮಾಡಿಸಿದ ಸಮಾಜ ಕಾರ್ಯಕರ್ತೆ

ಪ್ರಗತಿವಾಹಿನಿ ಸುದ್ದಿ, ಭುಬನೇಶ್ವರ: ಒಡಿಶಾದ ಖ್ಯಾತ ನೃತ್ಯಕಲಾವಿದೆಯೊಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮುನ್ನ ಐಸಿಯುನಲ್ಲಿ ಒತ್ತಾಯಪೂರ್ವಕ ಡ್ಯಾನ್ಸ್ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದೆ ಕಮಲಾ ಪೂಜಾರಿ ಅವರು ಕಿಡ್ನಿ ಸಮಸ್ಯೆಯಿಂದ ಕಟಕ್ ನಗರದ ಸರಕಾರಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಚೇತರಿಸಿಕೊಂಡು ಬಿಡುಗಡೆ ಹೊಂದುತ್ತಿದ್ದ ವೇಳೆ ಮಮತಾ ಬೆಹರಾ ಎಂಬ ಸಾಮಾಜಿಕ ಕಾರ್ಯಕರ್ತೆ ಅವರಿಗೆ ನೃತ್ಯ ಮಾಡುವಂತೆ ಒತ್ತಾಯಿಸಿದರೆನ್ನಲಾಗಿದೆ.

ಆಸ್ಪತ್ರೆಯ ಐಸಿಯುನಲ್ಲಿ 70 ವರ್ಷದ ಕಮಲಾ ಪೂಜಾರಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿನ್ನೆಲೆಯಲ್ಲಿ ಸಂಗೀತದೊಂದಿಗೆ ಸಾಮಾಜಿಕ ಕಾರ್ಯಕರ್ತೆಯೂ ಅವಳೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

“ನಾನು ಎಂದಿಗೂ ನೃತ್ಯ ಮಾಡಲು ಬಯಸಲಿಲ್ಲ ಆದರೆ ಬಲವಂತವಾಗಿ ಮಾಡಿಸಲಾಯಿತು. ನಾನು ಅದನ್ನು ಪದೇ ಪದೇ ನಿರಾಕರಿಸಿದೆ, ಆದರೆ ಅವಳು (ಸಮಾಜ ಕಾರ್ಯಕರ್ತೆ) ಕೇಳಲಿಲ್ಲ. ನಾನು ನೃತ್ಯ ಮಾಡಲೇಬೇಕಾಯಿತು. ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ, ”ಎಂದು ಪೂಜಾರಿ ಅವರು ಕೊರಾಪುಟ್ ಜಿಲ್ಲೆಯ  ಟಿವಿ ಚಾನೆಲ್ ಗಳ ಮುಂದೆ ಹೇಳಿಕೊಂಡಿದ್ದಾರೆ.

Home add -Advt

ಪರಾಜ್ ಬುಡಕಟ್ಟು ಸಮುದಾಯದವರಾದ ಕಮಲಾ ಪೂಜಾರಿ ಅವರನ್ನು ಕಿಡ್ನಿ ಸಮಸ್ಯೆ ಮಧ್ಯೆಯೂ ವೃದ್ಧಾಪ್ಯದಲ್ಲಿ ಅವರ ಆರೋಗ್ಯದ ಸ್ಥಿತಿ ಗಮನಿಸದೆ ಐಸಿಯುನಲ್ಲಿ ನರ್ತಿಸಲು ಹೇಳಿದ್ದ ಸಾಮಾಜಿಕ ಕಾರ್ಯಕರ್ತೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬಂದಿವೆ. ಇದಕ್ಕೆ ವಿಫಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಪರಜಾ ಸಮಾಜದ ಅಧ್ಯಕ್ಷ ಹರೀಶ ಮುದುಳಿ ಎಚ್ಚರಿಸಿದ್ದಾರೆ.

ರಾಮದುರ್ಗ- ದೊಡಮಂಗಡಿ ಮಧ್ಯದ ಸೇತುವೆ ಮುಳುಗಡೆ

Related Articles

Back to top button