
ಪ್ರಗತಿವಾಹಿನಿ ಸುದ್ದಿ : ಏ.22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿ ಘಟನೆ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಉತ್ಸವ ಕರಾವಳಿ ಉತ್ಸವವನ್ನು ರದ್ದುಗೊಳಿಸಿ ಕಾರವಾರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈಗಾಗಲೇ ದೇಶದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಕರಾವಳಿ ಉತ್ಸವಕ್ಕೆ ತಯಾರಿ ನಡೆದಿದ್ದು ಪರಿಸ್ಥಿತಿ ಹೀಗಿರುವಾಗ ಕರಾವಳಿ ಉತ್ಸವ ಬೇಕಾ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇನ್ನು ಭದ್ರತಾ ಹಿತದೃಷ್ಟಿಯಿಂದ ಸರ್ಕಾರ ಉತ್ಸವ ರದ್ದುಗೊಳಿಸಿದೆ. ಮೇ 4ರಿಂದ 5 ದಿನ ನಡೆಯಬೇಕಾಗಿದ್ದ ಉತ್ಸವವನ್ನು ಇದೀಗ ರದ್ದು ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಇದಲ್ಲದೇ ಕರಾವಳಿ ಪ್ರದೇಶವು ತೀರಾ ಸೂಕ್ಷ್ಮ ಪ್ರದೇಶವಾಗಿದ್ದು, ದೇಶದಲ್ಲಿ ಇಂತಹ ಪರಿಸ್ಥಿತಿ ಇರುವಾಗ ಕರಾವಳಿ ಉತ್ಸವ ಬೇಡ ಎಂದು ಸರ್ಕಾರವೂ ನಿರ್ಧರಿಸಿ ಈ ಉತ್ಸವವನ್ನು ರದ್ದು ಮಾಡಿದೆ.