
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಇಲ್ಲಿಗೆ ಸಮೀಪದ ಕರೋಶಿ ಎನ್ನುವಲ್ಲಿ ಪಾಕಿಸ್ತಾನ ದೇಶದ ಕರೆನ್ಸಿ ಒಂದು ಪತ್ತೆಯಾಗಿದ್ದು, ಈ ಕುರಿತು ಚಿಕ್ಕೋಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿ ಕರೋಶಿ ಗ್ರಾಮವು ಇರುತ್ತದೆ. ಇದೀಗ ಪಾಕಿಸ್ತಾನದ ಕರೆನ್ಸಿ ಸಿಕಿದ್ದು ಗ್ರಾಮದಲ್ಲಿ ಸಂಚಲನ ಮೂಡಸಿದೆ.
ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕರೋಶಿ ಬಸ್ ನಿಲ್ದಾಣದ ರಸ್ತೆಯಲ್ಲಿ ಯುವಕನಿಗೆ ನೋಟು ಬಿದ್ದಿರುವುದು ಕಂಡು ಬಂದಿದೆ. ನೋಟು ಪಾಕಿಸ್ತಾನಿ ದೇಶದ್ದಾಗಿದ್ದು, ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರವನ್ನು ಹೊಂದಿದೆ. ನೋಟಿನ ಮೇಲೆ ಆಂಗ್ಲ ಭಾಷೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಹಾಗೂ ಉರ್ದು ಭಾಷೆಯಲ್ಲಿ ಅನ್ಯ ಮಾಹಿತಿ ಮುದ್ರಿಸಲಾಗಿದೆ. ಈ ನೋಟು 10 ರೂಪಾಯದ್ದಿದೆ.
ನೋಟನ್ನು ಚಿಕ್ಕೋಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಚಿಕ್ಕೋಡಿ ಪೊಲೀಸರು ಮತ್ತು ಗುಪ್ತಚರ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ. ಕರೋಶಿ ಗ್ರಾಮಕ್ಕೆ ಪಾಕಿಸ್ತಾನದಿಂದ ಯಾರಾದರೂ ಬಂದಿದ್ದಾರೆಯೇ? ನೋಟು ಎಲ್ಲಿಂದ ಬಂತು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.