ರಾಜನಾಥ್ ಸಿಂಗ್ ಪುತ್ರನ ದಾಖಲೆ ಗೆಲುವು ; ಅಖಿಲೇಶ್‌ಗೆ ಕರ‍್ಹಾಲ್‌ನಲ್ಲಿ ಮೊದಲ ಜಯ

ಪ್ರಗತಿ ವಾಹಿನಿ ಸುದ್ದಿ ಲಕ್ನೋ – ಪಂಚ ರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶದ ಚುನಾವಣೆ ಅತ್ಯಂತ ಕುತೂಹಲ ಕೆರಳಿಸಿತ್ತು. ಅನೇಕ ವಿವಾದಗಳು ಇದ್ದ ಹಿನ್ನೆಲೆಯಲ್ಲಿ ಈ ಬಾರಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೊ ಇಲ್ಲವೋ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿದ್ದವು. ಸಧ್ಯ ಚುನಾವಣೆ ಫಲಿತಾಂಶ ಹೊರ ಬಿದ್ದು ಮತ್ತೊಮ್ಮೆ ಯುಪಿಯಲ್ಲಿ ಯೋಗಿ ಸರ್ಕಾರ ರಚಿಸುವುದು ಖಚಿತವಾಗಿದೆ.

ಇನ್ನು ಉತ್ತರ ಪ್ರದೇಶದ ನೋಯ್ಡಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಪಂಕಜ್ ಸಿಂಗ್ ೨,೪೪,೩೧೯ ಮತಗಳನ್ನು ಪಡೆದಿದ್ದರೆ ಅವರ ಪ್ರತಿಸ್ಪರ್ಧಿ ಎಸ್‌ಪಿಯ ಸುನೀಲ್ ಚೌಧರಿ ೬೨,೮೦೬ ಮತ ಗಳಿಸಿದ್ದಾರೆ.

ಬರೋಬ್ಬರಿ ೧,೮೧೫೧೩ ಮತಗಳ ಭಾರಿ ಅಂತರದಿಂದ ಪಂಕಜ್ ಸಿಂಗ್ ಗೆದ್ದಿದ್ದಾರೆ. ೨೦೧೭ರ ಚುನಾವಣೆಯಲ್ಲೂ ಅವರು ಇದೇ ಕ್ಷೇತ್ರದಿಂದ ೧,೦೪೦೧೬ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಅಖಿಲೇಶ್‌ಗೆ ಕರ್ಹಾಲ್‌ನಲ್ಲಿ ಮೊದಲ ಜಯ

ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕರ್ಹಾಲ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಕ್ಷೇತ್ರದಲ್ಲಿ ತಮ್ಮ ಮೊದಲ ಗೆಲುವು ಸಾಧಿಸಿದ್ದಾರೆ. ಅಖಿಲೇಶ್ ೬೭,೦೦೦ ಮತಗಳ ಅಂತರದಿಂದ ಗೆದ್ದಿದ್ದಾರೆ.

Home add -Advt

ಏಪ್ರಿಲ್ ನಲ್ಲಿ ರಾಜ್ಯಕ್ಕೆ ಪ್ರಧಾನಿ ಮೋದಿ- ಬೊಮ್ಮಾಯಿ ಮಾಹಿತಿ; 2023ರ ಚುನಾವಣೆ ಪ್ರಚಾರಕ್ಕೆ ಅಧಿಕೃತ ಚಾಲನೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button