ಪ್ರಗತಿವಾಹಿನಿ ಸುದ್ದಿ: ಸಿಬಿಐ ತನಿಖಾ ಸಂಸ್ಥೆಗೆ ನಿರ್ಬಂಧ ಹೇರುವ ಕ್ಯಾಬಿನೆಟ್ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಹಲವು ರಾಜ್ಯಗಳು ಸಿಬಿಐ ಸ್ವಯಂಪ್ರೇರಿತ ತನಿಖೆಗೆ ಅಂಕುಶ ಹಾಕಿದೆ. ಅನೇಕ ಸಂದರ್ಭದಲ್ಲಿ ಸಿಬಿಐ, ಸ್ವಯಂಪ್ರೇರಿತರಾಗಿ ಬಂದು ತನಿಖೆ ಮಾಡಿದೆ. ಕೆಲವೆಡೆ ರಾಜ್ಯ ಸರ್ಕಾರ ತನ್ನ ಗಮನಕ್ಕೆ ತಂದು ತನಿಖೆ ನಡೆಸಿ ಎಂದು ನಿರ್ಬಂಧ ಹೇರಿವೆ. ಇಂತಹ ಅನೇಕ ಪ್ರಕರಣಗಳ ಉದಾಹರಣೆ ನಮ್ಮ ಕಣ್ಮುಂದೆ ಇದೆ. ಬಿಜೆಪಿ ಇದನ್ನೇ ದೊಡ್ಡ ವಿಷಯ ಮಾಡಿ ದಿಕ್ಕುತಪ್ಪಿಸುತ್ತಿದೆ ಎಂದು ಹೇಳಿದ್ರು.ಕಾಂಗ್ರೆಸ್ ಪಕ್ಷದ ಮಾಜಿ ಸ್ಪೀಕರ್ ಕೋಳಿವಾಡ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹ ಮಾಡಿದ್ದಾರೆ. ಕೋಳಿವಾಡ ತಮ್ಮ ಅಭಿಪ್ರಾಯವನ್ನ ಹೇಳಿದ್ದಾರೆ. ಯಾರ ಒತ್ತಡದಿಂದ ಅವರು ಈ ಹೇಳಿಕೆ ಕೊಟ್ಟಿದ್ದಾರೆ ಅನ್ನೋದನ್ನ ಮಾಧ್ಯಮದವರೇ ಕಂಡು ಹಿಡಿಯಿರಿ ಎಂದು ತಿಳಿಸಿದ್ರು.
ಮುಂಚಿನಿಂದಲೂ ಬಿಜೆಪಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಿದೆ.ಇದರಲ್ಲಿ ಹೊಸದೇನೂ ಇಲ್ಲ.ಈಗ ಸ್ವಲ್ಪ ತ್ವರಿತವಾಗಿ ರಾಜೀನಾಮೆ ಪಡೆಯಬೇಕೆಂದು ಪ್ರೊಟೆಸ್ಟ್ ಮಾಡ್ತಿದ್ದಾರೆ ಎಂದು ಪರಮೇಶ್ವರ ಟಾಂಗ್ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ