ಪರೇಶ ಮೇಸ್ತಾ ಸಾವು ಆಕಸ್ಮಿಕ ಎಂದು ವರದಿ ಸಲ್ಲಿಸಿದ ಸಿಬಿಐ

ಪ್ರಗತಿ ವಾಹಿನಿ ಸುದ್ದಿ, ಹೊನ್ನಾವರ –  ರಾಜ್ಯಾದ್ಯಂತ ಭಾರೀ  ಸಂಚಲನ ಮೂಡಿಸಿದ್ದ ಹೊನ್ನಾವರದಲ್ಲಿ 2017 ರ ಡಿಸೆಂಬರ್‌ನಲ್ಲಿ ನಡೆದ ನಡೆದ ಪರೇಶ್ ಮೇಸ್ತಾ ಸಾವಿನ ಪ್ರಕರಣ ಯೂಟರ್ನ್ ಹೊಡೆದಿದೆ. ಪರೇಶ್ ಮೇಸ್ತಾ ಕೊಲೆಯಾಗಿಲ್ಲ, ಅವರದ್ದು ಆಕಸ್ಮಿಕ ಸಾವು ಎಂದು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
  ಪರೇಶ ಮೇಸ್ತಾ ಎಂಬ ಮೀನುಗಾರ ಸಮುದಾಯದ ಯುವಕನ ಮೃತದೇಹ ಹೊನ್ನಾವರದ ಶೆಟ್ಟಿಕೆರೆ ಎಂಬಲ್ಲಿ ಪತ್ತೆಯಾಗಿತ್ತು. ಇದಕ್ಕೂ ಎರಡು ದಿನ ಮೊದಲು ಹೊನ್ನಾವರದಲ್ಲಿ ಎರಡು ಕೋಮುಗಳ ನಡುವೆ ಗಲಭೆಯಾಗಿತ್ತು. ಹಾಗಾಗಿ ಪರೇಶ ಮೇಸ್ತಾ ಮೃತ ದೇಹ ಸಿಕ್ಕಿದಾಗ ಇದು ಮುಸ್ಲಿಮರು ಮಾಡಿದ ಕೊಲೆ ಎಂದು ಕೆಲ ಹಿಂದು ಸಂಘಟನೆಗಳು ಆರೋಪಿಸಿದ್ದವು.
ಬಿಜೆಪಿ ಮುಖಂಡರು ಸಹ ಇದೇ ಆರೋಪ ಮಾಡಿದ್ದರು. ಬಳಿಕ ಪರೇಶ ಮೇಸ್ತಾ ಮೃತಪಟ್ಟ ಎರಡೇ ದಿನದಲ್ಲಿ ಉತ್ತರ ಕನ್ನಡದ ಕಾರವಾರ, ಶಿರಸಿ, ಹೊನ್ನಾವರದಲ್ಲಿ ಗಲಭೆಯಾಗಿದ್ದಲ್ಲದೇ ಐಜಿ ಅವರ ಕಾರನ್ನೇ ಸುಟ್ಟು ಹಾಕಲಾಯಿತು.
 ಬಳಿಕ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಸುದೀರ್ಘ ನಾಲ್ಕೂವರೆ ವರ್ಷಗಳ ಕಾಲ ತನಿಖೆ ನಡೆಸಿದ ಸಿಬಿಐ ವಿಸ್ತೃತವಾದ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದೆ.
https://pragati.taskdun.com/latest/fsl-officershrutisuicidebangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button