ಮತ ಎಣಿಕೆ ನಿಮಿತ್ತ ಪಾರ್ಕಿಂಗ್ ವ್ಯವಸ್ಥೆ: ಬದಲಿ ಮಾರ್ಗ ವ್ಯವಸ್ಥೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆ (ಜೂನ್4) ಆರ್‌ಪಿಡಿ ಕಾಲೇಜಿನಲ್ಲಿ ಬೆಳಗಾವಿ ಲೋಕಸಭೆ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆ ಜರುಗಲಿದ್ದು, ಮತ ಎಣಿಕೆ ಕಾರ್ಯಕ್ಕೆ ಬರುವ ಅಧಿಕಾರಿ, ಸಿಬ್ಬಂದಿ, ಅಭ್ಯರ್ಥಿಗಳು, ಏಜೆಂಟರು, ವರದಿ ಮಾಡಲು ಬರುವ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ಕುರಿತು ಈ ಕೆಳಗಿನಂತೆ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಹಾಗೂ ಸಿಬ್ಬಂದಿ & ಮಾಧ್ಯಮ ಪ್ರತಿನಿಧಿಗಳು, ಭಾಗ್ಯ ನಗರ 2ನೇ ಕ್ರಾಸ್ ಮೂಲಕ ಲೋಕಮಾನ್ಯ ಮಲ್ಟಿಪರ್ಪೋಸ್ ಕೋ-ಆಪರೇಟಿವ್ ಸೋಸಾಯಟಿ ದಾಟಿ ಎಡತಿರುವು ಪಡೆದುಕೊಂಡು ಮಾವಿನ ತೋಟದ ಗೇಟ ಮೂಲಕ ಆರ್‌ಪಿಡಿ ಕಾಲೇಜ್ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು.
ಅಭ್ಯರ್ಥಿಗಳಿಗೆ ಪಾರ್ಕಿಂಗ್ ವ್ಯವಸ್ಥೆ
ಆರ್‌ಪಿಡಿ ಕಾಲೇಜ್‌ನ 1ನೇ ಗೇಟ್ ಮೂಲಕ ಪ್ರವೇಶಿಸಿ ತಮ್ಮ ವಾಹನಗಳನ್ನು ಕೆಎಲ್‌ಎಸ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಪಾರ್ಕ್ ಮಾಡುವುದು.
ಏಜೆಂಟರಿಗೆ ಪಾರ್ಕಿಂಗ್ ವ್ಯವಸ್ಥೆ
ತಮ್ಮ ವಾಹನಗಳನ್ನು ಗೋಮಟೇಶ್ ಹೈಸ್ಕೂಲ್, ಹಿಂದವಾಡಿ ಶಾಲಾ ಮೈದಾನದಲ್ಲಿ ನಿಲುಗಡೆ ಮಾಡುವುದು, ಅಲ್ಲಿಂದ ನಡೆದುಕೊಂಡು ಬರುವುದು.
ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ
ಮತ ಎಣಿಕೆ ದಿನದಂದು ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಕೆಳಗೆ ನಮೂದಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡುವುದು.
ಗೋಕಾಕ, ಅರಭಾವಿ, ಭಾಗಗಳಿಂದ ಬರುವ ಸಾರ್ವಜನಿಕರು ಲೇಲೆ ಮೈದಾನ ಹಾಗೂ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು.
ಬೈಲಹೊಂಗಲ, ರಾಮದುರ್ಗ, ಸೌಂದತ್ತಿ ಯಲ್ಲಮ್ಮಗುಡ್ಡ ಭಾಗಗಳಿಂದ ಬರುವ ಸಾರ್ವಜನಿಕರು ಹಳಿ ಪಿಬಿ ರಸ್ತೆ, ನಾಥಪೈ ಸರ್ಕಲ್ ಮೂಲಕ ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಎಡಬದಿಯ ಆದರ್ಶ ನಗರ ಶಾಲೆ ಮೈದಾನ ಹಾಗೂ ಆದರ್ಶ ನಗರ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಒಂದು ಲೇನ್‌ದಲ್ಲಿ ನಿಲುಗಡೆ ಮಾಡುವುದು
ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಭಾಗಗಳಿಂದ ಬರುವ ಸಾರ್ವಜನಿಕರು 3ನೇ ರೇಲ್ವೆ ಗೇಟ ದಿಂದ ಪೀರನವಾಡಿ ವರೆಗಿನ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಒಂದು ಲೇನ್‌ದಲ್ಲಿ ನಿಲುಗಡೆ ಮಾಡುವುದು.
ಮಾರ್ಗ ಬದಲಿ (ಡೈವರ್ಶನ್)
ಟಿಳಕವಾಡಿ ಪ್ರದೇಶದಲ್ಲಿ ರೇಲ್ವೆ ಸಂಚಾರದಿಂದಾಗಿ 1ನೇ ರೇಲ್ವೆ ಗೇಟ್ ಹಾಗೂ 2ನೇ ರೇಲ್ವೆ ಗೇಟ್ ಇವುಗಳನ್ನು ಮೇಲಿಂದ ಮೇಲೆ ಬಂದ ಮಾಡಲಾಗುವುದರಿಂದ ಕಾಂಗ್ರೇಸ್ ರಸ್ತೆಯಲ್ಲಿ ಆ ದಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿರುತ್ತವೆ ಕಾರಣ ಸಾರ್ವಜನಿಕರು ಬದಲಿ ಮಾರ್ಗ ಬಳಸುವುದು.
1) ಗೋವಾವೇಸ್, 2) ಆರ್‌ಪಿಡಿ ರಸ್ತೆ 3) ಗುರುದೇವ ರಾನಡೆ ರಸ್ತೆ 4) 1ನೇ & 2ನೇ ರೇಲ್ವೆ ಗೇಟ್ ರಸ್ತೆ, 5) ಅನಗೋಳ ರಸ್ತೆ ಮತ್ತು 6) ಭಾಗ್ಯನಗರ ರಸ್ತೆ, ಈ ಮೇಲಿನ ರಸ್ತೆಗಳಲ್ಲಿ ಜನದಟ್ಟನೆ ಇರುವುದರಿಂದ, ಮುಂಜಾನೆ 7 ಗಂಟೆಯಿಂದ ಮತ ಎಣಿಕೆ ಮುಕ್ತಾಯದವರೆಗೆ ಸಾರ್ವಜನಕರು ಈ ಕೆಳಗಿನ ರಸ್ತೆಗಳಲ್ಲಿ ಸಂಚರಿಸುವಂತೆ ಕೋರಿದೆ.
1. ಗೋವಾವೇಸ್ ಸರ್ಕಲ್ ಕಡೆಯಿಂದ ಆರ್‌ಪಿಡಿ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳ ಸಂಚರಣಿಯನ್ನು ನಿರ್ಬಂಧಿಸಿದ್ದು, ಸದರಿ ವಾಹನಗಳು ಮಹಾವೀರ ಭವನ ಹತ್ತಿರ ಎಡತಿರುವ ತೆಗೆದುಕೊಂಡು ಗುರುದೇವ ರಾನಡೆ ರಸ್ತೆ, ಭಗತ ಸಿಂಗ್ ಗಾರ್ಡನ ಪಕ್ಷದ ರಸ್ತೆಯ ಮೂಲಕ ಆದರ್ಶ ನಗರ, ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಮುಂದಿನಿಂದ ಭಾಗ್ಯ ನಗರ 10ನೇ ಕ್ರಾಸ್ ಮುಖಾಂತರ ಅನಗೋಳ ಹರಿ ಮಂದಿರ ಕ್ರಾಸ್ ಸೇರಿ ಮುಂದೆ ಸಾಗುವುದು.
3ನೇ ರೇಲ್ವೆ ಗೇಟ್ ಮೂಲಕ ಗೋವಾವೇಸ್ ಸರ್ಕಲ್ ಕಡೆಗೆ ಸಂಚರಿಸುವವರು ಅನಗೋಳ ಕ್ರಾಸ್, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ ಹತ್ತಿರ ಎಡತಿರುವು ಪಡೆದುಕೊಂಡು 2ನೇ ರೇಲ್ವೆ ಗೇಟ್ ಮೂಲಕ ಕಾಂಗ್ರೇಸ್ ರಸ್ತೆ ಸೇರಿ ಮುಂದೆ ಸಾಗುವುದು.
ಶಹಾಪೂರ ಕಡೆಯಿಂದ ನಗರಕ್ಕೆ ಬರುವ ಎಲ್ಲ ಮಾದರಿ ವಾಹನಗಳು ಗೋವಾವೇಸ್ ಸರ್ಕಲ್ ಹತ್ತಿರ ಬಲತಿರುವ ಪಡೆದು ಮಹಾತ್ಮಾ ಫುಲೆ ರಸ್ತೆ, ಕಪಿಲೇಶ್ವರ ಫೈ ಓವರ್, ಶನಿಮಂದಿರ ಮೂಲಕ ಅಥವಾ ಹಳೆ ಪಿ.ಬಿ. ರಸ್ತೆ ಮೂಲಕ ಸಂಚರಿಸುವುದು.
ನೋ-ಪಾರ್ಕಿಂಗ್ ರೋನ್
ಗೋವಾವೇಸ್ ಸರ್ಕಲ್‌ದಿಂದ ಅನಗೋಳ ಕ್ರಾಸ್ ವರೆಗಿನ ಖಾನಾಪೂರ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡದೇ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಬೆಳಗಾವಿ ನಗರ ಪೊಲೀಸರು ಕೊರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ