
ಪ್ರಗತಿವಾಹಿನಿ ಸುದ್ದಿ: ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕಲಾಪ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯರೊಬ್ಬರ ಸೀಟಿನಡಿ ಕಂತೆ ಕಂತೆ ಹಣ ಪತ್ತೆಯಾಗಿರುವ ಘಟನೆ ನಡೆದಿದೆ.
ತೆಲಂಗಾಣದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿರುವ ಅಭಿಶೇಕ್ ಮನು ಸಿಂಘಿ ಅವರು ಕುಳಿತುಕೊಳ್ಳುವ ಸೀಟಿನಡಿ 500 ರೂ ನೋಟುಗಳ ಬಂಡಲ್ ಪತ್ತೆಯಾಗಿದೆ. ಅದರಲ್ಲಿ 50 ಸಾವಿರ ರೂ ಹಣ ವಿತ್ತು ಎನ್ನಲಾಗಿದೆ.
ಸಭಾಪತಿ ಜಗದೀಪ್ ಧನಕರ್ ಅವರು ಅಭಿಷೇಕ್ ಮನು ಸಿಂಘ್ವಿ ಅವರಿಗೆ ನಿಯೋಜಿಸಲಾಗಿದ್ದ ಸೀಟಿನ ಸಂಖ್ಯೆ 222ರಲ್ಲಿ ಹಣದ ಬಂಡಲ್ ಪತ್ತೆಯಾಗಿದೆ. ಪ್ರಕರಣ ತನಿಖೆಗೆ ಆದೇಶಿಸಲಾಗಿದೆ ಎಂದರು. ಈ ಹೇಳಿಕೆ ನೀಡುತ್ತಿದ್ದಂತೆ ಕಾಂಗ್ರೆಸ್ ಸಂಸದರು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತನಿಖೆಗೆ ಮುನ್ನ ಹೆಸರು ಹೇಳಬಾರದಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್ ಮನಿಸಿಂಘ್ವಿ , ಸದನ ಕಲಾಪ ಕೆಲ ಕಾಲ ಮುಂದೂಡಲಾಗಿತ್ತು. ಈ ವೇಳೆ ಸದನದಿಂದ ನಾನು ಎದ್ದು ಹೊಗಿದ್ದೆ. ಸದನ ಮುಂದೂಡಿದ ಬಳಿಕ ದಿನನಿತ್ಯದ ತಪಾಸಣೆಯ ಸಮಯದಲ್ಲಿ ಭದ್ರತಾ ಅಧಿಕಾರಿಗಳಿಗೆ ನೋಟಿನ ಬಂಡಲ್ ಸಿಕ್ಕಿದೆಯಂತೆ. ಇದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ