
ಪ್ರಗತಿವಾಹಿನಿ ಸುದ್ದಿ: ಪಿಡಿಓ ಮೇಲೆ ದರ್ಪ ತೋರಿದ ಮರಾಠಿ ಪುಂಡನಿಗೆ ಎಂಇಎಸ್ ಸನ್ಮಾನ ಮಾಡುವ ಮೂಲಕ ಮತ್ತೊಂದು ಉದ್ಧಟತನ ಮೆರೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಎಂಇಎಸ್ ಪುಂಡಾಟ ಖಂಡಿಸಿ, ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಇಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ರಾಜ್ಯಾದ್ಯಮ್ತ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ನಾಡದ್ರೋಹಿ ಎಂಇಎಸ್ ಮುಖಂಡರು ಪಿಡಿಒ ಮೇಲೆ ದರ್ಪ ತೋರಿದ ಮರಾಠಿ ಪುಂಡನಿಗೆ ಸನ್ಮಾನಿಸುವ ಮೂಲಕ ಪ್ರಚೋದನಾತ್ಮಕವಾಗಿ ವರ್ತನೆ ತೋರಿದ್ದಾರೆ.
ಕಿಣಯೇ ಗ್ರಾಮದ ತಿಪ್ಪಣ್ಣ ಡೋಕ್ರೆಗೆ ಎಂಇಎಸ್ ಮುಖಂಡ ಶುಭಂ ಶಳ್ಕೆ ಸನ್ಮಾನ ಮಾಡಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ ತಿಪ್ಪಣ್ಣ ಡೋಕ್ರೆಗೆ ಎಂಇಎಸ್ ಮುಖಂಡರು ಸನ್ಮಾನ ಮಾಡಿದ್ದಾರೆ.
ತಿಪ್ಪಣ್ಣ ಡೋಕ್ರೆ ಮರಾಠಿ ಭಾಷೆಯಲ್ಲಿ ದಾಖಲೆ ಕೊಡಬೇಕು, ಮರಾಠಿಯಲ್ಲೇ ಮಾತನಾಡಬೇಕೆಂದು ಕಿಣಯೇ ಗ್ರಾಪಂ ಪಿಡಿಒ ನಾಗೇಂದ್ರ ಪತ್ತಾರರನ್ನು ನಿಂದಿಸಿ ದರ್ಪ ಮೆರೆದಿದ್ದ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ತಿಪ್ಪಣ್ಣ ಡೋಕ್ರೆಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು.
ಇಂದು ಹಿಂಡಲಗಾ ಜೈಲಿನಿಂದ ಹೊರಬರುತ್ತಿದ್ದಂತೆ ಎಂಇಎಸ್ ಮುಖಂಡ ಶುಭಂ ಶಳ್ಕೆ ತಿಪ್ಪಣ್ಣ ಡೋಕ್ರೆ ಮನೆಗೆ ಹೋಗಿ ಆತನನ್ನು ಸನ್ಮಾನ ಮಾಡಿದ್ದಾರೆ. ಪಿಡಿಒ ಮೇಲೆ ದರ್ಪ ಮೆರೆದ ಎಂಇಎಸ್ ಪುಂಡನಿಗೆ ಸನ್ಮಾನ ಮಾಡಿರುವ ಕ್ರಮಕ್ಕೆ ಕನ್ನಡಿಗರು, ಸರವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.