ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ನವಿಲಗಳ ನರ್ತನ ಮನಸೂರೆಗೊಳ್ಳುವಂತಿದೆ.
ಇಲ್ಲಿಯ ಸುಂದರ ಪರಿಸರದಲ್ಲಿ ಹತ್ತಾರು ರೀತಿಯ ಪ್ರಾಣಿ, ಪಕ್ಷಿಗಳು ವಾಸವಾಗಿದ್ದು, ಮನಸ್ಸಿಗೆ ಆನಂದ ನೀಡುತ್ತವೆ. ಅತ್ಯಂತ ಅಹ್ಲಾದಕರವಾದ ವಾತಾವರಣದಲ್ಲಿ ಪ್ರಾಣಿ, ಪಕ್ಷಿಗಳು ಕುಣಿದು ಕುಪ್ಪಳಿಸುತ್ತವೆ.
ಇಲ್ಲೀಗ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಒಂದಿಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪರಿಸರ ಮತ್ತು ಅಲ್ಲಿರುವ ಜೀವಿಗಳಿಗೆ ಪೂರಕವಾಗಿಯೇ ಯೋಜನೆ ರೂಪಿಸಲಾಗಿದೆ. ಬೆಳಗಾವಿ ನಗರ ಮಧ್ಯದಲ್ಲಿಯೇ ವ್ಯಾಕ್ಸಿನ್ ಡಿಪೋ ಆವರಣ ಇರುವುದರಿಂದ ಬೆಳಗ್ಗೆ, ಸಂಜೆ ಸಾರ್ವಜನಿಕರು ವಾಯುವಿಹಾರಕ್ಕೆ ಆಗಮಿಸುತ್ತಾರೆ.
ಇಲ್ಲಿ ನವಿಲುಗಳು ವಿಹರಿಸುತ್ತಿರುವ ದೃಷ್ಯಗಳನ್ನು ಬೆಳಗಾವಿಯ ಛಾಯಾಗ್ರಾಹಕ ಪಿ.ಕೆ.ಬಡಿಗೇರ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಈ ಸುದ್ದಿಯನ್ನೂ ಓದಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ