ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ವಿವಿಧ ಇಲಾಖಾವಾರು ಭರಪೂರ ಅನುದಾನ ಹಂಚಿಕೆ, ಮಾಡಿದ್ದು ಇದೊಂದು ಜನಪರ ಬಜೆಟ್ ಎಂದು ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಪ್ರತಿಕ್ರಿಯಿಸಿದ್ದಾರೆ.
ಶಿಕ್ಷಣಕ್ಕೆ3,79,560 ಕೋಟಿ ನೀಡುವ ಮೂಲಕ ಬಜೆಟ್ನ ಶೇ. 12ರಷ್ಟು ಶಿಕ್ಷಣಕ್ಕೆ ಮೀಸಲಿರಿಸಲಾಗಿದೆ. ಜಲಸಂಪನ್ಮೂಲಕ್ಕೆ 22,854 ಕೋಟಿ ಅಂದರೆ ಬಜೆಟ್ನ ಶೇ. 7ರಷ್ಟು, ಗ್ರಾಮೀಣಾಭಿವೃದ್ಧಿಗೆ 20,494 ಕೋಟಿ (ಬಜೆಟ್ನ ಶೇ. 6ರಷ್ಟು,) ನಗರಾಭಿವೃದ್ಧಿಗೆ 17,938 ಕೋಟಿ ಮೀಸಲಿರಿಸಲಾಗಿದೆ.
ಕಂದಾಯ ಇಲಾಖೆಗೆ 15,943 ಕೋಟಿ ಮೀಸಲು, ಆರೋಗ್ಯ ಇಲಾಖೆಗೆ 15,151 ಕೋಟಿ ಇರಿಸಲಾಗಿದೆ. ಬಜೆಟ್ನ ಶೇ. 5 ಆರೋಗ್ಯಕ್ಕೆ ಮೀಸಲಾಗಿದೆ.
ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಹಾಯಧನ ಏರಿಕೆ ನಿರ್ಣಯ ಸಮಯೋಚಿತವಾಗಿದ್ದು , 1000 ದಿಂದ 1500 ರ ವರೆಗೆ ಶಾಲಾ-ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಒದಗಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಈ ಮೂಲಕ ಯುವಜನರ ಪರ ಧೋರಣೆಯನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ರೈತರಿಗೆ ಬಡ್ಡಿರಹಿತ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷಕ್ಕೆ ವಿಸ್ತರಣೆ ಮಾಡಲಾಗಿದೆ. 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 25 ಸಾವಿರ ಕೋಟಿ ಸಾಲ. ಕಿಸಾನ್ ಕಾರ್ಡ್ ಹೊಂದಿದವರಿಗೆ ಭೂ ಸಿರಿ ಯೋಜನೆ ಆರಂಭ. ಖಾನಾಪುರಕ್ಕೆ ಸಮುದಾಯ ಆರೋಗ್ಯ ಕೇಂದ್ರ ನೀಡಲಾಗಿದೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಘೋಷಿಸಲಾಗಿದೆ.
ಪ್ರಸಕ್ತಸಾಲಿನಲ್ಲಿ 10 ಸಾವಿರ ರೂ. ಹೆಚ್ಚುವರಿ ಸಹಾಯಧನ, ತೀರ್ಥಹಳ್ಳಿಯಲ್ಲಿ ಕೃಷಿ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ಅನುದಾನ ಘೋಷಣೆ, ಕೃಷಿ ಹಾಗೂ ತೋಟಗಾರಿಕೆಗಾಗಿ 9,456 ಕೋಟಿ ಘೋಷಣೆ ಮಾಡಲಾಗಿದ್ದು ಎಲ್ಲ ವರ್ಗದವರ ಹಿತ ಗಮನಿಸಿದ ದೂರದೃಷ್ಟಿತ್ವವುಳ್ಳ ಬಜೆಟ್ ಅನ್ನು ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದಾರೆ ಎಂದು ಡಾ. ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.
*ಉದ್ಯೋಗ ಸಿಗದ ಪದವೀಧರರಿಗೆ ಯುವಸ್ನೇಹಿ ಯೋಜನೆ ಆರಂಭ*
https://pragati.taskdun.com/karnataka-budget-2023cm-basavaraj-bommaividhanasoudhayuva-snehi-yojana/
*ಆಶಾಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಗ್ರಂಥಪಾಲಕರ ಗೌರವ ಧನ ಹೆಚ್ಚಳ*
https://pragati.taskdun.com/karnataka-buidget-2023cm-basavaraj-bommaividhanasoudha-6/
https://pragati.taskdun.com/karnataka-budget-2023cm-basavaraj-bommaividhanasoudhahalli-muttu-yojana/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ