
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಅನುಮತಿ
ಪ್ರಗತಿವಾಹಿನಿ ಸುದ್ದಿ: ಕಳೆದ ವರ್ಷ ಆರ್ಸಿಬಿ ತಂಡ ಕಪ್ ಗೆದ್ದ ವೇಳೆ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತದಿಂದ ಸಾವು-ನೋವುಗಳು ಸಂಭವಿಸಿದ್ದವು. ಹೀಗಾಗಿ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಬ್ರೇಕ್ ಬಿದ್ದಿತ್ತು. ಆದರೆ ಇದೀಗ ಅಂತರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳಿಗೆ ರಾಜ್ಯ ಸರಕಾರದ ಗೃಹ ಇಲಾಖೆ ಅನುಮತಿ ನೀಡಿದೆ.
ಸದ್ಯ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಸರಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ಕೆಎಸ್ಸಿಎ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಮತ್ತು ಐಪಿಎಲ್ 2026 ರ ಪಂದ್ಯಗಳು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜನೆ ಬಹುತೇಕ ಖಚಿತವಾಗಿದೆ. ಕೆಎಸ್ ಸಿಎಗೆ ಗೃಹ ಇಲಾಖೆ ಷರತ್ತುಬದ್ಧ ಅವಕಾಶ ನೀಡಿದೆ. ಈ ಬಗ್ಗೆ ಕೆಎಸ್ಸಿಎಗೆ ಅಧಿಕೃತ ಮಾಹಿತಿ ನೀಡಿದೆ.
ಈಗಾಗಲೇ ಪೊಲೀಸರು ಕೆಲ ಬದಲಾವಣೆ ಸೂಚಿಸಿದ್ದಾರೆ. ಭದ್ರತೆಗೆ ಸಂಬಂಧಿಸಿದಂತೆ ಪೊಲೀಸರಿಂದ ಮಾರ್ಗಸೂಚಿ ಸಿದ್ಧವಾಗಿದೆ. 33 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದ ಕ್ರೀಡಾಂಗಣದಲ್ಲಿ ಪಾರ್ಕಿಂಗ್ & ಪಿಕ್ ಉಂಡ್ ಡ್ರಾಪ್ಗೆ ವ್ಯವಸ್ಥೆ ಮಾಡಬೇಕು. ಪ್ರೇಕ್ಷಕರು ಕ್ಯೂ ನಿಲ್ಲುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಕಿರಿದಾದ ಗೇಟ್ಗಳನ್ನ ಕನಿಷ್ಠ 6 ಅಡಿ ಅಗಲದ ಜಾಗ ಇರಬೇಕು. ಚಿನ್ನಸ್ವಾಮಿ ಕ್ರೀಡಾಂಗಣದ ಎಂಟ್ರಿ & ಎಕ್ಸಿಟ್ ಸುಲಭಗೊಳಿಸಬೇಕು. ಮಹಿಳೆಯರು, ಮಕ್ಕಳ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.


