ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕಳೆದ ನಾಲ್ಕುತಿಂಗಳುಗಳಿಂದ ದೇಸಹದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದ್ದು, ಅದರಲ್ಲೂ ಕಳೆದ 15 ದಿನಗಳಿಂದ ಪ್ರತಿದಿನ ತೈಲ ಬೆಲೆ ಹೆಚ್ಚಳವಾಗುತ್ತಿದೆ. ಜನಸಾಮಾನ್ಯರು ಜೀವನ ನದೆಸುವುದು ದುಸ್ತರವಾಗಿದೆ.
ಕಳೆದ 15 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ ಸರಾಸರಿ 9.59 ಪೈಸೆ ಏರಿಕೆಯಾಗಿದೆ. ಇಂದು ಮತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು ಲೀಟರ್ ಗೆ 80 ಪೈಸೆ ಹೆಚ್ಚಳವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್ಗೆ 84 ಪೈಸೆ ಹೆಚ್ಚಾಗಿದ್ದು, 110.25ರೂ ಇದೆ. ಡೀಸೆಲ್ ದರ ಲೀಟರ್ಗೆ 78 ಪೈಸೆ ಏರಿಕೆಯಾಗಿದ್ದು, ಲೀಟರ್ ಡೀಸೆಲ್ ದರ 94.01ರೂ ಇದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 104.61 ರೂ, ಡೀಸೆಲ್ 95.87 ರೂ ಆಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ 119.67, ಡೀಸೆಲ್ 103.92ರೂ ಇದ್ದರೆ ಚೆನ್ನೈನಲ್ಲಿ ಪೆಟ್ರೋಲ್ ಲೀಟರ್ ಗೆ 110.11 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 100.19 ರೂಪಾಯಿ ಇದೆ. ತಿರುವನಂತಪುರದಲ್ಲಿ ಲೀಟರ್ ಪೆಟ್ರೋಲ್ 116 ರೂ., ಡೀಸೆಲ್ 103.11 ರೂ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ