Latest

13ನೇ ದಿನವೂ ಸತತ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸತತ 13ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ತೈಲ ಬೆಲೆ ಗಗನಕ್ಕೇರುತ್ತಿದೆ. ಕಳೆದ 52 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 24 ಬಾರಿ ಹೆಚ್ಚಾಗಿದೆ.

ದೇಶದಲ್ಲಿ ಇಂದೂ ಕೂಡ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ 93.61 ರೂ., ಡೀಸೆಲ್ 85.84 ರೂ. ಇದೆ.

ಮುಂಬೈ- ಪೆಟ್ರೋಲ್ 97 ರೂ., ಡೀಸೆಲ್ 88.06 ರೂ., ಜೈಪುರ – ಪೆಟ್ರೋಲ್ 97.10 ರೂ., ಡೀಸೆಲ್ 89.44 ರೂ, ಚೆನ್ನೈ- ಪೆಟ್ರೋಲ್ 92.59 ರೂ., ಡೀಸೆಲ್ 85.98 ರೂ., ಕೋಲ್ಕತ್ತಾ- ಪೆಟ್ರೋಲ್ 91.78 ರೂ. ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್ 90.58 ರೂ., ಡೀಸೆಲ್ 80.97 ರೂ. ಇದ್ದರೆ ಲಕ್ನೋದಲ್ಲಿ ಪೆಟ್ರೋಲ್ 88.86 ರೂ., ಡೀಸೆಲ್ 81.35 ರೂ. ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button