ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರಿನ ಯುವಕನೊಬ್ಬ ಕ್ರಿಕೇಟ್ ದಿಗ್ಗಜ ಎಂ. ಎಸ್. ಧೋನಿಯ ಮೇಣದ ಪ್ರತಿಮೆ ತಯಾರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾ ಮುಗ್ಗಾ ಟ್ರೋಲ್ ಆಗಿದ್ದಾರೆ.
ಧೋನಿಯ ಫ್ಯಾನ್ ಆಗಿರುವ ಯುವಕ ಧೋನಿಯ ಮೇಣದ ಪ್ರತಿಮೆ ತಯಾರಿಸಿದ್ದಾರೆ. ಬಳಿಕ ಅದರ ಜತೆ ನಿಂತು ಫೋಟೊ ತೆಗೆಸಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ ಮೇಣದ ಪ್ರತಿಮೆ ಧೋನಿಯನ್ನು ಸ್ವಲ್ಪವೂ ಹೋಲುತ್ತಿಲ್ಲ ಎಂಬುದು ಸೋಷಿಯಲ್ ಮೀಡಿಯಾ ಬಳಕೆದಾರರ ಆಕ್ಷೇಪ. ಒಬ್ಬರಂತೂ ” ” ಇದರಲ್ಲಿ ಧೋನಿ ಎಲ್ಲಿದ್ದಾರೆ ?” ಎಂದು ಕೇಳಿದ್ದಾರೆ.
ಖ್ಯಾತ ಕ್ರಿಕೇಟ್ ಬರಹಗಾರ ಜರೋದ್ ಕಿಂಬರ್ ” that’s a big no from me ” ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು, ” ಮೂರ್ತಿಯ ಪಕ್ಕ ನಿಂತ ಯುವಕನೇ ( ಮೂರ್ತಿ ರಚಿಸಿದವರು ) ಧೋನಿಯನ್ನು ಹೆಚ್ಚು ಹೋಲುತ್ತಾರೆ ” ಎಂದು ಟೀಕಿಸಿದ್ದಾರೆ.
ಇನ್ನೊಬ್ಬರು ” ಈ ಮೂರ್ತಿ ಶೋಯೆಬ್ ಮಲ್ಲಿಕ್ ಅವರದ್ದಾ ?” ಎಂದು ಕೇಳಿದ್ದಾರೆ. ಆದರೆ ಎಂ. ಎಸ್. ಧೋನಿ ಮೇಲಿನ ಅಭಿಮಾನದಿಂದ ಯುವಕ ಮೂರ್ತಿ ತಯಾರಿಸಿದ್ದು, ಧೋನಿ ಮೇಲಿನ ಅವರ ಅಭಿಮಾನಕ್ಕೆ ಸಾಟಿ ಇಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ.
6 ವರ್ಷದ ಬಳಿಕ ಪಾಕ್ ವಿರುದ್ಧ ಭಾರತಕ್ಕೆ ಸೋಲು
https://pragati.taskdun.com/latest/india-losecricket-matchagainst-pakafter-6-years/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ