ರಿಯಾದ್ – ಪೈಲೆಟ್ ಒಬ್ಬ ಕೆಲಸದ ಅವಧಿ ಮುಗಿದ ಕಾರಣ ವಿಮಾನವನ್ನು ಅರ್ಧದಲ್ಲೇ ಇಳಿಸಿ ಬಿಟ್ಟುಹೋದ ಶಾಕಿಂಗ್ ವಿದ್ಯಮಾನ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದಿದೆ.
ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನ (ಪಿಐಎ) ಪೈಲಟ್ ಇಂಥಹ ವಿಚಿತ್ರ ವರ್ತನೆ ತೋರಿದವ. ಪಿಐಎ ವಿಮಾನ ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಹೊರಟಿತ್ತು. ಆದರೆ ಮಾರ್ಗಮಧ್ಯೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನವನ್ನು ಸೌಧಿಯ ರಿಯಾದ್ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು. ಹವಾಮಾನ ಸರಿಯಾದ ಬಳಿಕ ವಿಮಾನ ಟೇಕ್ ಆಪ್ ಮಾಡಲು ಸೂಚನೆ ನೀಡಿದರೆ ಪೈಲಟ್ ನಾಪತ್ತೆಯಾಗಿದ್ದ. ಬಳಿಕ ವಿಚಾರಿಸಿದಾಗ ತನ್ನ ಕೆಲಸದ ಶಿಪ್ಟ್ ಮುಗಿದಿದೆ ಎಂದು ಆತ ತಿಳಿಸಿದ್ದ !
ಪ್ರಯಾಣಿಕರ ಪ್ರತಿಭಟನೆ
ಬದಲಿ ವಿಮಾನ ವ್ಯವಸ್ಥೆ ಮಾಡಲು ಮುಂದಾದರೂ ಪ್ರಯಾಣಿಕರು ಪೈಲಟ್‌ನ ವರ್ತನೆ ವಿರೋಧಿಸಿ ಪ್ರತಿಭಟಿಸಿದರು. ವಿಮಾನದಿಂದ ಕೆಳಗಿಳಿಯಲು ನಿರಾಕರಿಸಿದರು. ಕೊನೆಗೂ ರಿಯಾದ್ ಏರ್‌ಪೋರ್ಟ್‌ನ ಅಧಿಕಾರಿಗಳು ಪ್ರಯಾಣಿಕರ ಮನವೊಲಿಸಲು ಯಶಸ್ವಿಯಾದರು. ಅಲ್ಲದೇ ಬದಲಿ ವಿಮಾನ ವ್ಯವಸ್ಥೆಯಾಗುವವರೆಗೂ ಪ್ರಯಾಣಿಕರಿಗೆ ಹೊಟೇಲ್‌ನಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಪಾಕಿಸ್ತಾನಿ ಪೈಲಟ್‌ನ ವರ್ತನೆ ಕುರಿತು ಪ್ರತಿಕ್ರಿಯೆ ನೀಡಿರುವ ಏರ್‌ಲೈನ್ಸ್ ಅಧಿಕಾರಿಗಳು, ವಿಮಾನ ಸಂಚಾರದ ಸುರಕ್ಷತೆಯ ದೃಷ್ಟಿಯಿಂದ ಪೈಲಟ್‌ಗಳಿಗೆ ನಿಗದಿತ ವೇಳೆಯ ಬಳಿಕ ವಿಶ್ರಾಂತಿಯ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಪಿಐಎ ಪೈಲಟ್‌ನ ವರ್ತನೆಯಲ್ಲಿ ತಪ್ಪಿಲ್ಲ ಎಂದು ತಿಳಿಸಿದ್ದಾರೆ.
ಕೆಜಿಎಫ್ -2 : ರವೀನಾ ಟಂಡನ್ ಆ ಆಸೆ ಈಡೇರಲೇ ಇಲ್ವಂತೆ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ