Kannada NewsLatest

*ವಿಮಾನ ಹರಾಟದ ವೇಳೆ ಟಾಯ್ಲೆಟ್ ನಲ್ಲಿ ಕುಸಿದು ಬಿದ್ದ ಪೈಲಟ್ ಸಾವು*

ಪ್ರಗತಿವಾಹಿನಿ ಸುದ್ದಿ; ಚಿಲಿ: ವಿಮಾನದ ಟಾಯ್ಲೆಟ್ ನಲ್ಲಿ ಪೈಲಟ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಿಮಾನದಲ್ಲಿ ನಡೆದಿದೆ.

271 ಪ್ರಯಾಣಿಕರನ್ನು ಹೊತ್ತು ಚಿಲಿಗೆ ಹೊರಟಿದ್ದ ವಿಮಾನ ಬಾತ್ ರೂಮ್ ನಲ್ಲಿ ಕುಸಿದು ಬಿದ್ದ ಪೈಲಟ್ ಇವಾನ್ ಸಾವನ್ನಪ್ಪಿದ್ದಾರೆ. ತಕ್ಷಣ ವಿಮಾನವನ್ನು ಪನಾಮ ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

Home add -Advt

LATAM ವಿಮಾನ ಟೇಕ್ ಆಫ್ ಆದ ಮೂರು ಗಂಟೆಗಳ ನಂತರ ಈ ಘಟನೆ ನಡೆದಿದೆ. ತಕ್ಷಣ ವಿಮಾನ ಸಿಬ್ಬಂದಿ ಪೈಲಟ್ ಗೆ ತುರ್ತು ಚಿಕಿತ್ಸೆ ನೀಡಿದ್ದಾರೆ. ಆದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ವಿಮಾನ ಪನಾಮ ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶವಾಗುತ್ತಿದ್ದಂತೆ ವೈದ್ಯಕೀಯ ಸಿಬ್ಬಂದಿ ಪೈಲಟ್ ಗೆ ಚಿಕಿತ್ಸೆ ನೀಡಲು ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

ಇವಾನ್ ಇಪ್ಪತ್ತೈದು ವರ್ಷಗಳ ಸುದೀರ್ಘ ಅನುಭವ ಹೊಂದಿದ್ದರು. ಅವರ ಸೇವೆ, ಸಮರ್ಪಣೆ ಅಮೂಲ್ಯ ಕೊಡುಗೆಯಾಗಿದೆ. ಸದಾ ಅವರಿಗೆ ಕೃತಜ್ಞರಾಗಿರುವುದಾಗಿ ವಿಮನಯಾನ ಸಂಸ್ಥೆ ತಿಳಿಸಿದೆ.

Related Articles

Back to top button