ಬೆಂಗಳೂರಿನಲ್ಲೂ ಪ್ಲ್ಯಾಸ್ಟಿಕ್ ಮುಕ್ತ ಅಭಿಯಾನ -ಹುಕ್ಕೇರಿ ಶ್ರೀ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನವನ್ನು ನವೆಂಬರ್ 2018ರಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆರಂಭಿಸಿದ್ದು, ಈಗಾಗಲೇ ಲಕ್ಷಾಂತರ ಬಟ್ಟೆ ಚೀಲಗಳನ್ನು ವಿತರಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ಯಲಹಂಕ ಶ್ರೀನಿವಾಸ ನಗರದಲ್ಲಿ ಬರುವ ಕೊಳಚೆ ಪ್ರದೇಶದಲ್ಲಿ ಇಂದು ಸುಮಾರು ಐದು ಸಾವಿರ ಬಟ್ಟೆ ಚೀಲವನ್ನು ವಿತರಿಸಿ ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾದ ಸ್ವಚ್ಚ ಭಾರತ ಅಭಿಯಾನಕ್ಕೆ ಎಲ್ಲರೂ ಶ್ರಮಿಸಬೇಕೆಂದು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ನಾವು ಸಹ ಪ್ಲಾಸ್ಟಿಕ್ ಮುಕ್ತ ಯಲಹಂಕ ಮಾಡಲು ತಾವೆಲ್ಲರೂ ಕೈ ಜೋಡಿಸಬೇಕೆಂದು ಹುಕ್ಕೇರೀಶ ಬಳಗದ ಅಧ್ಯಕ್ಷ, ಚಲನಚಿತ್ರ ನಟ, ನಿರ್ದೇಶಕ ಡಾ.ರಾಧಾಕೃಷ್ಣ ಪಲ್ಲಕ್ಕಿ ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಯಲಹಂಕದ ಕೊಳಚೆ ಪ್ರದೇಶದಲ್ಲಿರುವ ಮನೆ ಮನೆಗಳಿಗೆ ತೆರಳಿ ಬಟ್ಟೆ ಚೀಲಗಳನ್ನು ನೀಡಿ ಪ್ಲಾಸ್ಟಿಕ್ ತ್ಯಜೀಸುವಂತೆ ಜನರಲ್ಲಿ ಅವರಿವು ಮೂಡಿಸಿದರು.
ಹುಕ್ಕೇರೀಶ ಬಳಗದ ಸದಸ್ಯ ಬಸವರಾಜ ಮಾತನಾಡಿ, ನಾವು ಗುರುಗಳ ಆಜ್ಞೆಯಂತೆ ಎಲ್ಲರಿಗೂ ಬಟ್ಟೆ ಚೀಲ ನೀಡುತ್ತೇವೆ. ಪ್ಲಾಸ್ಟಿಕ್ ನಿಂದ ಆಗುವ ತೊಂದರೆಯ ಬಗ್ಗೆ ಅರ್ಥೈಸಿಕೊಂಡು ಎಲ್ಲರು ಮುಂದೆ ಪ್ಲಾಸ್ಟಿಕ್ ಬಳಕೆ ಮಾಡಿದವುದನ್ನು ನಿಲ್ಲಿಸಬೇಕೆಂದರು.
ವೀರಶೈವ ಲಿಂಗಾಯತ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕನವಾಡಿ ಮಾತನಾಡಿ, ಉತ್ತರ ಕರ್ನಾಟಕದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಸ್ವತಃ ತಾವೇ ವಿಶೇಷವಾಗಿ ಬೆಂಗಳೂರಿನಲ್ಲಿ ಇಂಥ ಅಪರೂಪದ ಕಾರ್ಯ ಮಾಡುತ್ತಿದ್ದಾರೆ. ನಾವು ಕೂಡ ಅವರ ಜೊತೆಯಾಗಿ ಪ್ಲಾಸ್ಟಿಕ್ ಮುಕ್ತ ಮಾಡಲು ಶ್ರಮಿಸುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ