Latest

ಬಸವಣ್ಣನವರ ಅನುಭವ ಮಂಟಪ ವಿಶ್ವದ ಮೊದಲ ಸಂಸತ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಕಲ್ಪನೆಯಿತ್ತು. ಬಸವಣ್ಣನವರ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ ಭವನವಾಗಿತ್ತು. ಅಂದೇ ನಾಡಿನ ಅಭಿವೃದ್ಧಿ, ಉನ್ನತಿಗೆ ಅನುಭವ ಮಂಟಪ ಕೆಲಸ ಮಾಡುತ್ತಿತ್ತು. ಸಂಸತ್ ಭವನ ಬಸವಣ್ಣನವರ ಅನುಭವ ಮಂಟಪದ ಪ್ರತೀಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ ನೂತನ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಹೊಸ ಸಂಸತ್ ಭವನವನ್ನು ನೋಡಿ ಯುವ ಜನಾಂಗ ಹೆಮ್ಮೆ ಪಡುತ್ತಾರೆ. ಇಂದು ಪ್ರಜಾಪ್ರಭುತ್ವದಲ್ಲಿ ಐತಿಹಾಸಿಕ ದಿನವಾಗಿದೆ. 2022ಕ್ಕೆ ನೂತನ ಸಂಸತ್ ಭವನ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.

ಬಸವಣ್ಣನವರ ಅನುಭವ ಮಂಟಪ ವಿಶ್ವದ ಮೊದಲ ಸಂಸತ್. 12ನೇ ಶತಮಾನದಲ್ಲೇ ಅನುಭವ ಮಂಟಪ ಅಸ್ತಿತ್ವದಲ್ಲಿತ್ತು. ಸಂಸತ್ ಭವನ ಬಸವಣ್ಣನವರ ಅನುಭವ ಮಂಟಪದ ಪ್ರತೀಕ. ಭಾರತ ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವಿರುತ್ತದೆ. ಆದರೆ ಸಂಪರ್ಕ ಕಳೆದುಕೊಳ್ಳಬಾರದು. ಸಂವಾದವೇ ಪ್ರಜಾಪ್ರಭುತ್ವದ ಆತ್ಮ. ದೇವಾಲಯದಲ್ಲಿ ದೇವರ ಸ್ಥಾಪನೆಯಾದಾಗ ಮಾತ್ರ ಅದು ನಿಜವಾದ ದೇವಾಲಯವಾಗುತ್ತದೆ. ಸಂಸದರು ಆಯ್ಕೆಯಾಗಿ ಬಂದಾಗ ಮಾತ್ರ ಸಂಸತ್ ಗೆ ಬೆಲೆ ಬರುತ್ತದೆ. ಸಂಸದರು ಕಲಾಪದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ಪ್ರತಿಯೊಬ್ಬ ಸಂಸದ ಜನರಿಗೆ ಉತ್ತರ ಕೊಡಲೇಬೇಕು. ದೇಶದ ಅಭಿವೃದ್ಧಿಗಾಗಿ ತೊಡಗಿಕೊಳ್ಳಬೇಕು. ಸಂಸದರು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ಬದಲಾಗುತ್ತಿರುವ ಜನಗತ್ತಿನಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವಿದೆ ಎಂದು ಹೇಳಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button