ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಇದು ಶತಮಾನದಲ್ಲೇ ಅತಿ ದೊಡ್ಡ ಸಾಂಕ್ರಾಮಿಕ ರೋಗವಾಗಿದೆ. ಕೊರೊನಾ ವೈರಸ್ ಜೊತೆಗೆ ಚಂಡಮಾರುತವನ್ನು ಎದುರಿಸುತ್ತಿರುವ ಜನರ ಸಂಯಮ, ತಾಳ್ಮೆಗೆ ಕೃತಜ್ಞತೆಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
77ನೇ ಮನ್ ಕಿ ಬಾತ್ ರೆಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ಸಾಂಕ್ರಾಮಿಕ ರೋಗವನ್ನು ಸಮರೋಪಾದಿಯಲ್ಲಿ ಎದುರಿಸುತ್ತಿದ್ದೇವೆ. ವೈದರು, ನರ್ಸ್, ಪೊಲೀಸರು ಸೇರಿದಂತೆ ಕೋವಿಡ್ ವಾರಿಯರ್ಸ್ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೋಗಿಗಳು ಆಕ್ಸಿಜನ್ ಅಭಾವದಿಂದಾಗಿ ಜೀವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ದೇಶದ ಮೂಲೆ ಮೂಲೆಗಳಿಗೂ ವೇಗವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ವಿದೇಶಗಳಿಂದಲೂ ದೇಶಕ್ಕೆ ಆಕ್ಸಿಜನ್ ಬಂದಿದೆ. ನೌಕಾಪಡೆ, ವಾಯುಪಡೆ, ಡಿಆರ್ ಡಿಒ ಸಹಕಾರದಿಂದ ಆಮ್ಲಜನಕ ಸಾಂದ್ರಕಗಳು, ಕ್ರಯೋಜನಿಕ್ ಟ್ಯಾಂಕರ್ ಗಳನ್ನು ತರಲಾಗಿದೆ ಎಲ್ಲರ ಶ್ರಮ ಶ್ಲಾಘನೀಯ ಎಂದು ಹೇಳಿದರು.
ಆಕ್ಸಿಜನ್ ಇಲ್ಲದೇ ಜನರು ಸಂಕಷ್ಟಕ್ಕೀಡಾಗಿದ್ದ ಸಂದರ್ಭದಲ್ಲಿ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿನ ಲೋಕೋ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದ ಶಿರಿಷಾ ಜೊತೆ ಮಾತನಾಡಿದ ಪ್ರಧಾನಿ, ದೇಶ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಲೋಕೋ ಪೈಲಟ್ ಆಗಿ ಸೇವೆ ಸಲ್ಲಿಸಿದ ಮಹಿಳೆಯರ ಕಾರ್ಯ ಇಡೀ ದೇಶಕ್ಕೆ ಹೆಮ್ಮೆ. ಮಹಿಳಾ ಶಕ್ತಿಗೆ ಉದಾಹರಣೆ ಎಂದು ಹೇಳಿದರು.
ಇದೇ ವೇಳೆ ಆಕ್ಸಿಜನ್ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಾಯುಸೇನಾ ಗ್ರೂಪ್ ಕ್ಯಾಪ್ಟನ್ ಪಟ್ನಾಯಕ್ ಹಾಗೂ ಪುತ್ರಿ ಅದಿತಿ ಜೊತೆ ಪ್ರಧಾನಿ ಮೋದಿ ಮಾತನಾಡಿದ್ದು ಕುಟುಂಬದವರನ್ನು ಬಿಟ್ಟು ಕೋವಿಡ್ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವಕ್ಕೆ ಅಭಿನಂದನೆ ಸಲ್ಲಿಸಿದರು.
ಕೊರೊನಾ ರಾಶ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಸೈನಿಕರು, ವಾರಿಯಸ್, ಜನ ಸಾಮಾನ್ಯರು ಕೂಡ ಹಗಲುರಾತ್ರಿ ಶ್ರಮಿಸುತ್ತಿದ್ದು, ಎಲ್ಲರಿಗೂ ಇಡೀ ದೇಶದ ಪರವಾಗಿ ನಮನಸಲ್ಲಿಸುವುದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ