Latest

ಇದು ನಾಚಿಕೆಗೇಡಿನ ಸಂಗತಿ; ಪ್ರಜಾತಂತ್ರದ ಮೇಲಿನ ದಾಳಿ ಎಂದು ಗುಡುಗಿದ ಕಂಗನಾ ರಾಣಾವತ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಯಾಣದ ವೇಳೆ ಪಂಜಾಬ್ ನಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಕಿಡಿಕಾರಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್, ಇದು ನಾಚಿಕೆಗೇಡಿನ ಸಂಗತಿ. ಉದ್ದೇಶಪೂರ್ವಕವಾಗಿ ನಡೆದ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ನಿನ್ನೆ ಪಂಜಾಬ್ ಗೆ ತೆರಳಿದ್ದ ಪ್ರಧಾನಿ ಮೋದಿ, ಫ್ಲೈ ಓವರ್ ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಹುಸೇನಿವಾಲಾ ರಾಷ್ಟ್ರೀಯ ಹುತಾತ್ಮ ಸ್ಮಾರಕ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ರೈತರು ಪ್ರತಿಭಟನೆ ಆರಂಭಿಸಿರುವುದು ಗೊತ್ತಾಗಿದೆ. ಭದ್ರತಾ ಲೋಪದಿಂದಾಗಿ ಪಂಜಾಬ್ ಫೈ ಓವರ್ ನಲ್ಲಿ ಕಾರಿನ ಭದ್ರತಾ ಸಿಬ್ಬಂದಿಗಳ ಜೊತೆ ಪ್ರಧಾನಿ ಕೆಲಸಮಯ ಸಿಲುಕಿದ್ದರು. ಈ ಬಗ್ಗೆ ದೇಶಾದ್ಯಂತ ರಾಜಕೀಯವಾಗಿ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆ ಬೆನ್ನಲ್ಲೇ ಇನ್ ಸ್ಟಾಗ್ರಾಮ್ ನಲ್ಲಿ ಕಿಡಿಕಾರಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್, ಇದು ಪ್ರಜಾತಂತ್ರದ ಮೇಲೆ ನಡೆದ ದಾಳಿಯಾಗಿದೆ ಎಂದಿದ್ದಾರೆ.

140 ಕೋಟಿ ಜನರ ಧ್ವನಿಯಾಗಿರುವ ಪ್ರಧಾನಿ ಮೋದಿ ತೆರಳುತ್ತಿದ್ದ ವೇಳೆ ಭದ್ರತಾ ಲೋಪವಾಗಿರುವುದು ನಾಚಿಕೆಗೇಡಿನ ಸಂಗತಿ. ಇದು ಪ್ರತಿಯೊಬ್ಬ ಭಾರತೀಯನ ಮೇಲಿನ ದಾಳಿ.ಪಂಜಾಬ್ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಇಂತಹ ಚಟುವಟಿಕೆ ತಡೆಯದಿದ್ದರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳೆದ್ದಾರೆ.

Home add -Advt

 

Related Articles

Back to top button