Latest
ರಾಜ್ಯಸಭೆಯಲ್ಲಿ ಕಣ್ಣೀರಾದ ಪ್ರಧಾನಿ; ಗುಲಾಮ್ ನಬಿ ಆಜಾದ್ ಗೆ ವಿದಾಯ ಹೇಳುತ್ತಾ ಭಾವುಕರಾದ ಮೋದಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಜ್ಯಸಭೆಯ ನಾಲ್ವರು ಸದಸ್ಯರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿದಾಯದ ಭಾಷಣ ಮಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ನ ಗುಲಾಮ್ ನಬಿ ಆಜಾದ್ ಅವರ ಕಾರ್ಯವೈಖರಿ ಶ್ಲಾಘಿಸುತ್ತಾ, ಗದ್ಗದಿತರಾಗಿ ಕಣ್ಣೀರಿಟ್ಟರು.
ಗುಲಾಮ್ ನಬಿ ಆಜಾದ್, ಸಂಶಯ್ ಸಿಂಗ್, ಮೀರ್ ಮೊಹಮ್ಮದ್ ಹಾಗೂ ನಾಜಿರ್ ಅಹ್ಮದ್ ಅವರ ರಾಜ್ಯಸಭೆ ಅವಧಿ ಮುಕ್ತಾಯವಾಗಿದ್ದು, ಇಂದು ರಾಜ್ಯಸಭೆಯಲ್ಲಿ ವಿದಾಯದ ಭಾಷಣ ಮಾಡಿದ ಪ್ರಧಾನಿ ಮೋದಿ, ನಾಲ್ವರ ಕಾರ್ಯ ವೈಖರಿ ಶ್ಲಾಘಿಸಿ, ಭಾವುಕರಾಗಿ ಬೀಳ್ಕೊಟ್ಟರು.
ಈ ವೇಳೆ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ವೆಳೆ ಆಜಾದ್ ತುಂಬಾ ಬಾವುಕರಾಗಿದ್ದರು. ದೇಶದ ಬಗ್ಗೆ ಅವರಿಗಿದ್ದ ಕಾಳಜಿಯನ್ನು ನಾನು ಗಮನಿಸಿದ್ದೇನೆ. ಪಕ್ಷದ ಜೊತೆಗೆ ದೇಶದ ಬಗ್ಗೆ ಅವರಿಗಿದ್ದ ಜವಾಬ್ದಾರಿ ನೋಡಿದಾಗ ಅವರಿಗೆ ಸಮನಾಗಿ ಕೆಲಸ ಮಾಡುವುದು ಕಷ್ಟ. ಸ್ನೇಹಿತನ ರೂಪದಲ್ಲಿ ನಾನು ಅವರನ್ನು ಗೌರವಿಸುತ್ತೇನೆ ಎಂದು ಗದ್ಗದಿತರಾದರು.




