Latest

ಮಹಿಳೆ ಮೇಲೆ ಅತ್ಯಾಚಾರ, ಮಂಚಕ್ಕೆ ಕಟ್ಟಿಹಾಕಿ ಬರ್ಬರ ಹತ್ಯೆ; ಇಬ್ಬರು ಆರೋಪಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಮಹಿಳೆಯನ್ನು ಅತ್ಯಾಚಾರ ಮಾಡಿ ಬಳಿಕ ಮಂಚಕ್ಕೆ ಆಕೆಯ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಡ್ಯದ ಮದ್ದೂರಿನಲ್ಲಿ ಇಬ್ಬರು ಕಾಮುಕರು ಫೆಬ್ರವರಿ 1ರಂದು ಪೂರ್ಣಿಮಾ ಎಂಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದರಲ್ಲದೇ ಆಕೆಯ ಕತ್ತಲ್ಲಿದ್ದ ಚಿನ್ನದ ಸರ, ಬಳೆ, ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Home add -Advt

ಕೃತ್ಯದ ಬಳಿಕ ಆರೋಪಿಗಳು ರಾಮನಗರದಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರ ಮೂರು ತಂಡ ರಚನೆಯಾಗಿತ್ತು. ಅಂತಿಮವಾಗಿ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಮನುಕುಮಾರ್, ರಮೇಶ್ ಎಂದು ಗುರುತಿಸಲಾಗಿದೆ.

Related Articles

Back to top button