LatestUncategorized

*ವಾಹನ ಸವಾರರ ಗಮನಕ್ಕೆ; ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಬೇಟೆಗೆ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಇಂದು, ನಾಳೆ ಹಾಗೂ ನಾಡಿದ್ದು ಮೂರು ದಿನ ಭರ್ಜರಿ ರೋಡ್ ಶೋ, ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ.

ಇಂದು ಪ್ರಧಾನಿ ಮೋದಿ ತುಮಕೂರು ಹಾಗೂ ಬಳ್ಳಾರಿ ಸಮಾವೇಶ ಮುಗಿಸಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜಧಾನಿಯ ಹಲವು ಮಾರ್ಗಗಳು ಸಾರ್ವಜನಿಕ ಓಡಾಟಕ್ಕೆ ಬಂದ್ ಆಗಲಿವೆ. ಹಲವೆಡೆ ಪರ್ಯಾಯ ಮಾರ್ಗಕ್ಕೆ ಸೂಚಿಸಲಾಗಿದೆ.

ಇಂದು ಸಂಜೆ 5:30ರಿಂದ ರಾತ್ರಿ 7 ಗಂಟೆಯವರೆಗೆ ಈ ಕೆಳಕಂದ ರಸ್ತೆಗಳು ಬಂದ್ ಆಗಲಿವೆ.

ಹಳೆ ವಿಮಾನ ನಿಲ್ದಾಣ ರಸೆ
ಕೇಂಬ್ರಿಡ್ಜ್ ಲೇಔಟ್ ರಸ್ತೆ
ಇಂದಿರಾನಗರ 100 ಫೀಟ್ ರಸ್ತೆ
ಅರಳಿ ಕಟ್ಟೆ
ಎ ಎಸ್ ಸಿ ಸೆಂಟರ್
ಟ್ರಿನಿಟಿ ಸರ್ಕಲ್
ರಾಜಭವನ ರಸ್ತೆ
ಎಂಜಿ ರಸ್ತೆ
ಡಿಕನ್ ಸನ್ ರಸ್ತೆ
ಮಣಿಪಾಲ್ ಸೆಂಟರ್
ಕಬ್ಬನ್ ರಸ್ತೆ
ಬಿಆರ್ ವಿ ಜಂಕ್ಷನ್
ಇನ್ ಫೆಂಟ್ರಿ ರಸ್ತೆ
ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

Home add -Advt

ಇನ್ನೊಂದೆಡೆ ಮೇ 6 ಹಾಗೂ 7ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಲಿದ್ದು, ಅದಕ್ಕಾಗಿಯೂ ಸಿದ್ಧತೆ ನಡೆಸಲಾಗಿದೆ.

https://pragati.taskdun.com/karnatakaheavy-rain3-daysimdcyclone-effect/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button