Latest

*ಕಾಂಗ್ರೆಸ್ ಸುಳ್ಳು ಸರ್ವೆ ಮಾಡಿಸಿ ಜನರನ್ನು ವಂಚಿಸುತ್ತಿದೆ; ಪ್ರಧಾನಿ ಮೋದಿ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಗಳನ್ನು ಮಾಡಿ ದೇಶ ಹಾಗೂ ರಾಜ್ಯದ ಜನರನ್ನು ವಂಚಿಸಿದೆ. ಸುಳ್ಳು ಸರ್ವೆಗಳನ್ನು ಮಾಡಿ ಜನರನ್ನು ಮೋಸ ಮಾಡುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದಲ್ಲಿಯೂ ಕಾಂಗ್ರೆಸ್ ನವರು ವಂಚಿಸುತ್ತಿದ್ದಾರೆ. ಇಲ್ಲಿಯೂ ಸುಳ್ಳು ಸರ್ವೆಗಳನ್ನು ಮಾಡಿ ಹಣ ಬಲದ ಮೂಲಕವಾಗಿ ಸುಳ್ಳು ಸರ್ವೆ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.

ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಇಡೀ ದೇಶವದ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸಿತು. ಭ್ರಷ್ಟಾಚಾರಗಳನ್ನು ಮಾಡಿ ಇಡೀ ದೇಶದ ಜನರನ್ನು ವಂಚಿಸಿತು. ಈಗ ರಾಜ್ಯದಲ್ಲಿಯೂ ಕಾಂಗ್ರೆಸ್ ಸುಳ್ಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಜನರಿಗೆ ಮೋಸ ಮಾಡಲು ಹೊರಟಿದೆ. ಅಲ್ಲದೇ ಬಜರಂಗದಳ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ ಎಂದು ಕಿಡಿಕಾರಿದರು.

ಬಿಜೆಪಿ ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯವನ್ನಾಗಿ ಮಾಡಲಿದೆ. ನಾವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲಾ ಭರವಸೆಗಳನ್ನು ಈದೇರಿಸುತ್ತೇವೆ. ಎಲ್ಲಾ ಸಮಾಜದ ಜನರನ್ನು, ವರ್ಗಗಳ ಜನರನ್ನು ಅಭಿವೃದ್ಧಿ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಹೇಳಿದರು.

https://pragati.taskdun.com/k-s-eshwarappapriyanka-khargetigane/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button