LatestUncategorized

*ಕಾಂಗ್ರೆಸ್ ನ ವಿಚ್ಛಿದ್ರಕಾರಿ ನೀತಿಯ ಬಗ್ಗೆ ಎಚ್ಚರಿಕೆಯಿಂದ ಇರಿ; ಪ್ರಧಾನಿ ಮೋದಿ ಗುಡುಗು*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಭಯೋತ್ಪಾದಕತೆ, ಅರಾಜಕತೆಯನ್ನು ಬಿಜೆಪಿ ಎಂದಿಗೂ ಸಹಿಸಲ್ಲ, ವಿದೇಶಿಗರು ನಮ್ಮ ದೇಶದಲ್ಲಿ ಮೂಗು ತೂರಿಸಲುವುದನ್ನು ನಾನು ಒಪ್ಪುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ನಂಜನಗೂಡಿನ ಎಲಚಗೆರೆಬೋರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಕರ್ನಾಟಕವನ್ನು ದೇಶದಿಂದ ವಿಭಜಿಸಲು ಯತ್ನಿಸುತ್ತಿದೆ. ಕನ್ನಡಿಗರು ಇಂತಹ ನೀತಿಗೆ ಅವಕಾಶ ಕೊಡಬೇಡಿ. ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸುವ ಕೆಲಸವನ್ನು ಕಾಂಗ್ರೆಸ್ ನವರು ಮಡುತ್ತಿದ್ದಾರೆ. ಸಮಾಜವನ್ನು ವಿಂಗಡಿಸುವುದೇ ಕಾಂಗ್ರೆಸ್ ಇತಿಹಾಸ ಎಂದು ಆರೋಪಿಸಿದರು.

ಕರ್ನಾಟಕ ಭಾರತದ ಅವಿಭಾಜ್ಯ ಅಂಗ. ಈ ಮಾತನು ರಾಷ್ಟ್ರಕವಿ ಕುವೆಂಪು ಅವರೇ ಹೇಳಿದ್ದಾರೆ. ಕಾಂಗ್ರೆಸ್ ನ ವಿಚ್ಛಿದ್ರಕಾರಿ ನೀತಿ ಬಗ್ಗೆ ಕನ್ನಡಿಗರು ಎಚ್ಚರಿಕೆಯಿಂದ ಇರಿ ಎಂದು ಹೇಳಿದರು.

ಗಾಂಧಿ ಕುಟುಂಬ ವಿದೇಶಿ ಶಕ್ತಿಗಳಿಗೆ ಅವಕಾಶ ನೀಡಿದೆ. ಗೌಪ್ಯವಾಗಿ ವಿದೇಶಿ ಶಕಿಗಳಿಗೆ ಭಾರತದಲ್ಲಿ ಅವಕಾಶ ನೀಡುತ್ತಿದ್ದಾರೆ. ಈ ಮಾತನ್ನು ನಾನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ನನ್ನ ದೇಶದಲ್ಲಿ ವಿದೇಶಿಗರು ಮೂಗು ತೂರಿಸುವುದನ್ನು ನಾನು ಎಂದಿಗೂ ಸಹಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಭಯೋತ್ಪಾದಕರ ಮೇಲೆ ಕಾಂಗ್ರೆಸ್ ಆಶಿರ್ವಾದವಿದೆ. ಕಾಂಗ್ರೆಸ್ ಸರ್ಕಾರ ಇದ್ದರೆ ದೇಶದಲ್ಲಿ ಉಗ್ರರು ಬಾಲಬಿಚ್ಚಲು ಆರಂಭಿಸುತ್ತಾರೆ. ಭಯೋತ್ಪಾದನೆ, ಅರಾಜಕತೆಯನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ. ಕಾಂಗ್ರೆಸ್ ಗೆ ತಕ್ಕ ಪಾಥವನ್ನು ಕಲಿಸುವ ಕಾಲ ಸನ್ನಿಹಿತವಾಗಿದೆ. ಮೆ 10ರಂದು ನಿಮ್ಮ ಅಮೂಲ್ಯಮತಗಳನ್ನು ಬಿಜೆಪಿಗೆ ನೀಡಿ ಕರ್ನಾಟಕವನ್ನು ನಂಬರ್ ಒನ್ ಅಭಿವೃದ್ಧಿ ರಾಜ್ಯವನ್ನಾಗಿಸಲು ಅವಕಾಶ ನೀಡಿ ಎಂದು ಹೇಳಿದರು.

ಕಾಂಗ್ರೆಸ್ ನವರು ಹನ ಲೂಟಿ ಮಾಡಿಕೊಂಡು ಆರಾಮವಾಗಿದ್ದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಭಿವೃದ್ಧಿ ಯುಗ ಆರಂಭವಾಯಿತು. ಹೊಸ ಏರ್ ಪೋರ್ಟ್ ಗಳನ್ನು ನಿರ್ಮಿಸಲಾಯಿತು. ಮೂಲಸೌಕರ್ಯ ಕ್ಷೇತ್ರದಲ್ಲಿ ಆಧುನಿಕರಣ ಮಾಡಲಾಯಿತು. ರಕ್ಷಣಾ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆ ಮಾಡಲಾಯಿತು. ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕ ಘಟಕವನ್ನು ಕರ್ನಾಟಕದ ತುಮಕೂರಿನಲ್ಲಿ ಸ್ಥಾಪಿಸಲಾಯಿತು. 9 ವರ್ಷಗಳಲ್ಲಿ 1600ಕಿ.ಮೀ ರೈಲ್ವೆ ವಿದ್ಯುದ್ದೀಕರಣ ಮಾಡಿದ್ದೆವೆ. ದೇಶದಲ್ಲಿ ಹೊಸ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ವಿಶ್ವದ ಪ್ರಮುಖ ಮೊಬೈಲ್ ಕಂಪನಿಗಳು ಕರ್ನಾತಕಕ್ಕೆ ಬರುತ್ತಿವೆ.ಭಾರತಕ್ಕೆ ವಿದೇಶಿ ಬಂಡವಾಳ ಹರಿದುಬರುತ್ತಿದೆ. ಕರ್ನಾಟಕ ಸ್ಟಾರ್ತಪ್ ಗಳ ರಾಜಧಾನಿಯಗಬೇಕು ಎಂಬುದು ನಮ್ಮ ಕನಸಾಗಿದೆ. ಇದು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯ. ಈ ನಿಟ್ಟಿನಲ್ಲಿ ಈಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ನಿರ್ಣಿಯಿಸಿ ಮತದಾನ ಮಾಡುವಂತೆ ಕರೆ ನೀಡಿದರು.

https://pragati.taskdun.com/s-m-krishnasistersunitahouseit-raid/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button