Latest

*ಪ್ರಧಾನಿ ಮೋದಿ 2ನೇ ಹಂತದ ರೋಡ್ ಶೋ ಆರಂಭ; ಜನರತ್ತ ಕೈ ಬೀಸುತ್ತಾ ಸಾಗಿದ ಮೋದಿ; ಹೂಮಳೆಗರೆದು ಸ್ವಾಗತಿಸಿದ ಕಾರ್ಯಕರ್ತರು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಮೂರು ದಿನಗಳು ಮಾತ್ರ ಬಾಕಿಯಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಕೊನೆ ಹಂತದ ಪ್ರಚಾರ ನಡೆಸಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪ್ರಧಾನಿ ಮೋದಿ ಅವರ ಎರಡನೇ ಹಂತದ ರೊಡ್ ಶೋ ಆರಂಭವಾಗಿದೆ.

ನ್ಯೂ ತಿಪ್ಪಸಂದ್ರ ರಸ್ತೆಯಲ್ಲಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಧಾನಿ ಮೋದಿ ರೋಡ್ ಶೋ ಆರಂಭಿಸಲಾಗಿದೆ. ಮಳೆಯ ನಡುವೆಯೇ ಪ್ರಧಾನಿ ಮೋದಿ ನೋಡಲು ಸಾಗರೋಪಾದಿಯಲ್ಲಿ ಜನರು ಆಗಮಿಸಿದ್ದಾರೆ.

ನ್ಯೂ ತಿಪ್ಪಸಂದ್ರದಿಂದ ಟ್ರಿನಿಟಿ ಸರ್ಕಲ್ ವರೆಗೆ 6.5 ಕೀ ಮೀವರೆಗೆ ರೋಡ್ ಶೋ ನಡೆಯಲಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿರುವ ಜನರು, ಬಿಜೆಪಿ ಕಾರ್ಯಕರ್ತರು ರಸ್ತೆಯುದ್ದಕ್ಕೂ ಪ್ರಧನೈ ಮೋದಿ ಮೇಲೆ ಹೂಮಳೆಗರೆದು ಸ್ವಾಗತಿಸಿದ್ದಾರೆ. ಎಲ್ಲೆಲ್ಲೂ ಮೋದಿ ಮೋದಿ ಜೈಕಾರ ಮೊಳಗಿದೆ. ಪೊಲೀಸ್ ಬಿಗಿ ಭದ್ರತೆ ಮಧ್ಯೆ ತೆರದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಸಾಗಿದ್ದಾರೆ.

ಸಿವಿ ರಾಮನ್ ನಗರದ ಸುರಂಜನ್ ದಾಸ್ ರಸ್ತೆ, ಬೆಮಲ್ ಸರ್ಕಲ್, ಹೆಚ್ ಎ ಎಲ್ ಎರಡನೇ ಹಂತ, 80 ಅಡಿ ರಸ್ತೆ ಜಂಕ್ಷನ್, 12ನೇ ಮುಖ್ಯರಸ್ತೆ ಜಂಕ್ಷನ್, ಓಲ್ಡ್ ಮದ್ರಾಸ್ ರಸ್ತೆ ಮಾರ್ಗವಾಗಿ ರೋಡ್ ಶೋ ಟ್ರಿನಿಟಿ ಸರ್ಕಲ್ವರೆಗೆ ರೋಡ್ ಶೋ ಸಾಗಲಿದೆ.

Home add -Advt


https://pragati.taskdun.com/it-raidcongress-leaderskalaburgihaveri/

Related Articles

Back to top button