ನನ್ನನ್ನು ಟೀಕಿಸಲು ಡಿಕ್ಷನರಿಯಲ್ಲಿ ಹುಡುಕುತ್ತಿದ್ದಾರೆ ಎಂದು ಟೀಕೆ
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಉತ್ತರಿಸುತ್ತಾ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ಅವಿಶ್ವಾಸಕ್ಕೆ ಧನ್ಯವಾದಗಳು. ದೇಶದ ಜನರಿಗೆ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸವಿದೆ. 2024ರ ಚುನವಣೆಯಲ್ಲಿಯೂ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಇಂಡಿಯಾದ ಬಲ ಎನ್ ಡಿಎ ಬಲ ಎಂದು ಹೇಳಿದರು.
ವಿಪಕ್ಷದವರಿಗೆ ಕೇವಲ ಅಮ್ಮ ಪಕ್ಷದ ಬಗ್ಗೆ ಮಾತ್ರ ಯೋಚನೆ. ದೇಶದ ಬಗ್ಗೆ ಕಿಂಚಿತ್ತೂ ಯೋಚನೆ ಇಲ್ಲ. ನನ್ನನ್ನು ಟೀಕಿಸಲು ವಿಪಕ್ಷದವರು ಡಿಕ್ಷನರಿ ತೆಗೆದು ನೋಡುತ್ತಿದ್ದಾರೆ. ವಿಪಕ್ಷಗಳ ಟೀಕೆ, ವಾಗ್ದಾಳಿ ನನಗೆ ಟಾನಿಕ್ ಇದ್ದಂತೆ ಎಂದು ಹೇಳಿದ್ದಾರೆ.
1999ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಅಂದು ಶರಡ್ ಪವಾರ್ ನೇತೃತ್ವದಲ್ಲಿ ಅವಿಶ್ವಾಸ ಮಂಡಿಸಿದರು. ನಂತರ 2003ರಲ್ಲಿ ವಾಜಪೇಯಿ ಸರ್ಕಾರದ ವಿರುದ್ಧವೂ ಸೋನಿಯಾ ಗಾಂಧಿ ನೇತೃತ್ವದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದರು. 2018ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿದ್ದರು. ಅಂದೂ ಅವಿಸ್ವಾಸ ಮಂಡಿಸಲಾಗಿತ್ತು. ಈ ಅವಿಶ್ವಾಸ ನಿರ್ಣಯದಿಂದ ಸರ್ಕಾರಕ್ಕೆ ಯಾವುದೇ ಪರುಇಣಾಮ ಬೀರುವುದುಇಲ್ಲ. ಇಡೀ ದೇಶದ ಜನರು ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದರು.
ವಿಪಕ್ಷ ನಾಯಕರೇ ಫೀಲ್ಡಿಂಗ್ ಆರ್ಗನೈಸ್ ಮಾಡಿದ್ದು, ಆದರೆ ಸಿಕ್ಸರ್, ಫೋರ್ ಹೊಡೆದಿದ್ದು ಮಾತ್ರ ನಮ್ಮ ಕಡೆಯಿಂದ. ವಿಪಕ್ಷದವರು ಬರಿ ನೋ ಬಾಲ್ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಭಾರತ ಅಭಿವೃದ್ಧಿಯಾಗುತ್ತಿರುವುದನ್ನು ವಿದೇಶದಲ್ಲಿ ಕುಳಿತವರು ನೋಡುತ್ತಿದ್ದಾರೆ. ಆದರೆ ಭಾರತದ ಒಳಗೆ ಕುಳಿತವರಿಗೆ ಕಾಣುತ್ತಿಲ್ಲ. ನಾಲ್ಕು ದಿಕ್ಕುಗಳಲ್ಲಿಯೂ ಭಾರತದ ಬಗ್ಗೆ ಜೈಕಾರ ಹಾಕುತ್ತಿದ್ದಾರೆ. ಆದರೆ ವಿಪಕ್ಷದವರು ದೇಶಕ್ಕೆ ಜೈಕಾರ ಹಾಕುವುದನ್ನೂ ಸಹಿಸುತ್ತಿಲ್ಲ. ದೇಶದ ಜನ ನೀಡಿರುವ ವಿಶ್ವಾಸವನ್ನು ಇವರು ನಂಬುತ್ತಿಲ್ಲ. ಅವಿಶ್ವಾಸ ಎನ್ನುವುದು ವಿಪಕ್ಷಗಳ ರಕ್ತದಲ್ಲಿಯೇ ಇದೆ ಎಂದು ಟೀಕಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ