ಪ್ರಗತುವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೆಬ್‍ಸೈಟ್ ನ (@narendramodi_in) ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ಜಾನ್ ವೀಕ್ ಮೂಲಕ ಪ್ರಧಾನಿ ಮೋದಿ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ.
ಬರಾಕ್ ಒಬಮಾ, ಎಲೆನ್ ಮಸ್ಕ್ ಅವರ ಖಾತೆಗಳ ರೀತಿಯಲ್ಲಿ ಮೋದಿಯವರ ವೆಬ್‍ಸೈಟ್ ಹ್ಯಾಕ್ ಮಾಡಲಾಗಿದೆ. narendramodi.in ಟ್ವಿಟ್ಟರ್ ಅಕೌಂಟ್‍ನಲ್ಲಿ ವೆಬ್‍ಸೈಟ್ ಗೆ ಸಂಬಂಧಿಸಿದ ಮಾಹಿತಿ ಮತ್ತು ನಮೋ ಆ್ಯಪ್ ಕುರಿತ ಅಪ್ ಡೇಟ್ ನೀಡಲಾಗುತ್ತಿತ್ತು. ಅಕೌಂಟ್ ಹ್ಯಾಕ್ ಕುರಿತು ಪ್ರತಿಕ್ರಿಯಿಸಿರುವ ಟ್ವಟ್ಟರ್, ನರೇಂದ್ರ ಮೋದಿಯವರ ವೆಬ್‍ಸೈಟ್ ಖಾತೆಯಲ್ಲಿ ಉಂಟಾದ ಸಮಸ್ಯೆ ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹೇಳಿದೆ.
ತಡ ರಾತ್ರಿ ಸುಮಾರು ಮೂರು ಗಂಟೆಗೆ ನರೇಂದ್ರ ಮೋದಿಯವರ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿತ್ತು. ಈ ಖಾತೆಯನ್ನ ಜಾನ್ ವಿಕ್ ([email protected]) ಮೂಲಕ ಹ್ಯಾಕ್ ಮಾಡಲಾಗಿದೆ. ನಾವು ಪೇಟಿಎಂ ಮಾಲ್ ಹ್ಯಾಕ್ ಮಾಡಿಲ್ಲ. ಮಗದೊಂದು ಟ್ವೀಟ್ ನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ನ್ಯಾಶನಲ್ ರಿಲೀಫ್ ಫಂಡ್‍ಗೆ ಹಣ ಹಾಕುವಂತೆ ಹೇಳಲಾಗಿದೆ. ಆದ್ರೆ ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ