
ಪ್ರಗತಿವಾಹಿನಿ ಸುದ್ದಿ: ಬಾವಿ ಸ್ವಚ್ಛಗೊಳಿಸುವಾಗ ವಿಷಾನೀಲ ಸೋರಿಕೆಯಾಗಿ 8 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಕೊಂಡಾವತ್ ನಲ್ಲಿ ಈ ಘಟನೆ ನಡೆದಿದೆ. ಗಂಗೌರ್ ಮಾತಾ ವಿಶೇಷ ಆಚರಣೆಗಾಗಿ ಛೈಗಾಂವ್ ಮಖಾನ್ ಪ್ರದೇಶದಲ್ಲಿನ ಬಾವಿ ಸ್ವಚ್ಛ ಮಾಅಡುವಾಗ ಈ ದುರಂತ ಸಂಭವಿಸಿದೆ.
ಆರಂಭದಲ್ಲಿ ಇಬ್ಬರು ಬಾವಿಗಿಳಿದು ಸ್ವಚ್ಛತೆ ಮಾಡುತ್ತಿದ್ದರು. ಅವರಿಗೆ ಉಸಿರುಗಟ್ಟಿ ಅಸ್ವಸ್ಥರಾಗುತ್ತಿದ್ದಂತೆ ಇನ್ನೂ ಆರು ಜನರು ಬಾವಿಗಿಳಿದು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಎಂಟೂ ಜನರು ಬಾವಿಯಿಂದ ಹೊರಬರಲಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಬಾವಿಯಲ್ಲಿ ವಿಷಾನೀಲ ಸೋರಿಕೆಯಿಂದಾಗಿ ರಕ್ಷಣಾ ಸಿಬ್ಬಂದಿಗೂ ರಕ್ಷಣಾ ಕಾರ್ಯಕ್ಕೆ ತೊಡಕಾಗಿತ್ತು. ಆಕ್ಸಿಜನ್ ಮಾಸ್ಕ್ ನಿಂದ ಬಾವಿಯೊಳಗೆ ಇಳಿದು ಮೃತದೇಹ ಹೊರತೆಗೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.