ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ನಕಲು ಪ್ರಕರಣ: ಭಾರಿ ಟೆಕ್ನಾಲಜಿ ಬಳಕೆ; ಮತ್ತೆ 12 ಜನರ ಬಂಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲಾ ಪೊಲೀಸ್ ವಿಶೇಷ ಕಾರ್ಯಾಚರಣೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸಸ್ಟೆಬಲ್ ಪರೀಕ್ಷೆ ಅಕ್ರಮ ಮಾಡಲು ಪ್ರಯತ್ನದ ತಂಡವನ್ನು ಬಂಧಿಸಲಾಗಿದ್ದು, ಭಾರಿ ತಾಂತ್ರಿಕತೆ ಬಳಸಿ ಅಕ್ರಮವೆಸಗಿದ್ದು ಬಯಲಾಗಿದೆ.
ಭಾನುವಾರ ರಾಜ್ಯಾದ್ಯಂತ ಸಿವಿಲ್ ಪೊಲೀಸ್ ಕಾನ್ವೆಸ್ಟೆಬಲ್ ‘ನೇಮಖಾತಿಯ ಲಿಖಿತ ಪರೀಕ್ಷೆ ನಡೆದಿದ್ದು, ಅದರಂತೆ ಬೆಳಗಾವಿ ಕಮೀಶನರೆಟ್, ಮತ್ತು ಬೆಳಗಾವಿ ಜಿಲ್ಲೆ ಸಂಬಂಧಿಸಿದ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ಬೆಳಗಾವಿ ಶಹರದ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆದಿತ್ತು.
ಪರೀಕ್ಷೆ ನಡೆಯುವ ಕಾಲಕ್ಕೆ ಬ್ಯೂಟೊಸ್ ಡಿವಾಯಿಸ್ ಉಪಯೋಗಿಸಿ ಪರೀಕ್ಷೆ ಅಕ್ರಮ ನಡೆಸುವವರಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರ್ಷಿಠಾಧಿಕಾರಿಗಳಿಗೆ ಖಚಿತ ಮಾಹಿತಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ, ಬೆಳಗಾವಿ ಜಿಲ್ಲಾ ಸಿ.ಇ.ಎನ್ ಪೊಲೀಸ್ ರಾಣಿಯ ಪೊಲೀಸ್ ಇನ್ಸಪ್ಟರ್ ವಿರೇಶ ದೊಡಮನಿ, ಪಿಎಸ್‌ಐ ಸಂಗಮೇಶ ಹೊಸಮನಿ, ಬೆಳಗಾವಿ ಜಿಲ್ಲೆ ಡಿಸಿಐಬಿ ಘಟಕದ ಪಿಎಸ್‌ಐ ಬಿ.ಜೆ ಪಾಟೀಲ ಮತ್ತು ಅವರ ಸಿಬ್ಬಂದಿಯ ವಿಶೇಷ ತಂಡ ರಚಿಸಿದ್ದರು.
ಪರೀಕ್ಷೆ ಅಕ್ರಮದ ನಡೆಸುವವರ ಬಗ್ಗೆ ಖಚಿತ ಮಾಹಿತಿ ತೆಗೆದು ಸಂಬಂಧ ಪಟ್ಟ ಪೊಲೀಸ್ ಠಾಣೆಯ ಯವರೊಂದಿಗೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಆದೇಶಿಸಿದ್ದರು.
ವಿಶೇಷ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರೀಕ್ಷೆ ಅಕ್ರಮ ನಡೆಸುವವರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬೆಳಗಾವಿ ಶಹರದ ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಮತೀರ್ಥ ನಗರದಲ್ಲಿರುವ ಎಸ್.ಎಸ್. ಡೆಕೋರೆಟರ್ ಮತ್ತು ಇವೆಂಟ್ ಪ್ಲ್ಯಾನರ್ ಕಛೇರಿಯ ಎದುರಿಗೆ ಬಂದಾಗ ಅವರನ್ನು ನೋಡಿದ ಕೆಲವು ಜನರು ಕಛೇರಿಯ ಒಳಗೆ ಓಡಿ ಹೋದರು.
ಸಂಶಯ ಬಂದು ಎಸ್.ಎಸ್. ಡೆಕೋರೆಟರ್ ಮತ್ತು ಇವೆಂಟ್ ಪ್ಲಾನರ್ ಕಛೇರಿಯ ಒಳಗೆ ನೋಡಲಾಗಿ ಅಲ್ಲಿ ಕೆಲವು ಜನರು ಕುಳಿತು ಮೊಬೈಲ್ ಮತ್ತು ಬ್ಲೂಟೂತ್ ಡಿವಾಯಿಸ್ ಉಪಯೋಗಿಸಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯಲ್ಲಿಯ ಉತ್ತರ ಬಿಡಿಸುತ್ತಿರುವದು ಕಂಡು ಬಂತು. ಸ್ಥಳದಲ್ಲಿ ಒಟ್ಟು 12 ಜನರನ್ನು ಬಂಧಿಸಲಾಯಿತು.
ಅವರಿಂದ ಒಟ್ಟು 33 ಮೊಬೈಲ್, 09 ಮಾಸ್ಟರ್ ಕಾರ್ಡ ಡಿವಾಯಿಸ್‌ಗಳು, 19 ಬ್ಲೂಟೂತ್ ಡಿವಾಯಿಸ್‌ಗಳು, 03 ಟ್ಯಾಬ್ ಗಳು, 01 ಲ್ಯಾಪ್ ಟಾಪ್, 01 ಪ್ರಿಂಟರ್, 01 ಯುಕೋ ಸ್ಪೋಟ್ಸ್ ಕಾರ್ ಮತ್ತು 3 ಮೋಟರ್ ಸೈಕಲ್‌ಗಳನ್ನು ವಶಪಡಿಸಿಕೊಂಳ್ಳಲಾಗಿದೆ.
ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಅದೇ ಪ್ರಕರಣಕ್ಕೆ ಸಂಭಂದಿಸಿದಂತ ಬೆಳಗಾವಿ ಶಹರದ ವನಿತಾ ವಿದ್ಯಾಲಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಾಸ್ಟರ್ ಕಾರ್ಡ ಡಿವಾಯಿಸ್ ಮತ್ತು ಬ್ಲೂಟೂತ್ ಡಿವಾಯಿಸ್ ಉಪಯೋಗಿಸಿ ಪರೀಕ್ಷೆ ಬರೆಯುತ್ತಿದ್ದ ಒಬ್ಬಳು ಅಭ್ಯರ್ಥಿಯನ್ನು ಬಂಧಿಸಿದ್ದು, ಈ ಬಗ್ಗೆ ಬೆಳಗಾವಿ ಶಹರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದರಂತೆ ಬೆಳಗಾವಿ ಶಹರದ ಸರದಾರ ಪಿಯು ಕಾಲೇಜಿನಲ್ಲಿ ಮಾಸ್ಟರ್ ಕಾರ್ಡ ಡಿವಾಯಿಸ್ ಮತ್ತು ಬ್ಯೂಟೂತ್ ಡಿವಾಯಿಸ್ ಉಪಯೋಗಿಸಿ ಬರೆಯುತ್ತಿದ್ದ ಒಬ್ಬ ಆಭ್ಯರ್ಥಿಯನ್ನು ಬಂಧಿಸಿದ್ದು, ಈ ಬಗ್ಗೆ ಬೆಳಗಾವಿ ಶಹರದ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರಿಂದ ಒಂದೊಂದು ಮಾಸ್ಟರ್ ಕಾರ್ಡ ಡಿವಾಯಿಸ್ ಮತ್ತು ಬ್ಯೂಟೂತ್ ಡಿವಾಯಿಸ್ ವಶಪಡಿಸಿಕೊಳ್ಳಲಾಗಿದೆ.
ತನಿಖೆ ಮುಂದುವರಿದಿದೆ.
ಇದಕ್ಕೆ ಸಂಬಂಧಿಸಿದ ಈ ಮೊದಲಿನ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ –
ಅಡ್ವಾನ್ಸ್ಡ್ ಟೆಕ್ನಾಲಜಿ ಬಳಸಿ ನಕಲು ಮಾಡಿದ ಪರೀಕ್ಷಾರ್ಥಿ: ಬೆಳಗಾವಿಯಲ್ಲಿ ಬಂಧನ
ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ವೇಳೆ ನಕಲು: ಮತ್ತೊಬ್ಬ ಯುವತಿಯ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ