Kannada NewsKarnataka NewsLatest

ಡಿಸಿಸಿ ಬ್ಯಾಂಕ್ ದರೋಡೆ ಪ್ರಕರಣ ಭೇಧಿಸಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಡಿಸಿಸಿ) ಮುರಗೋಡ ಶಾಖೆ ದರೋಡೆ ಪ್ರಕರಣವನ್ನು ಪೊಲೀಸರು ಭೇಧಿಸಿದ್ದಾರೆ.

ಮಾರ್ಚ್ 5ರ ರಾತ್ರಿ  ಮುರಗೋಡ ಶಾಖೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಬರೋಬ್ಬರಿ 6 ಕೋಟಿಗೂ ಅಧಿಕ ಮೌಲ್ಯದ ಹಣ, ಚಿನ್ನಾಭರಣ ಲೂಟಿ ಮಾಡಿದ್ದರು.

ಬ್ಯಾಂಕ್ ಬಾಗಿಲು ಮುರಿದು ನಕಲಿ ಕೀ ಬಳಸಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಬರೋಬ್ಬರಿ 4.37 ಕೋಟಿ ರೂಪಾಯಿ ನಗದು, 1.63 ಕೋಟಿ ಮೌಲ್ಯದ ಬಂಗಾರವನ್ನು ಕದ್ದೊಯ್ದಿದ್ದರು.

ಇದೀಗ ಪೊಲೀಸರು ಪ್ರಕರಣ ಭೇಧಿಸಿದ್ದು, ಸಂಜೆ ಈ ಕುರಿತು ಮಾಹಿತಿ ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪತ್ರಿಕಾಗೊಷ್ಠಿ ಕರೆದಿದ್ದಾರೆ.

ಬ್ಯಾಂಕ್ ಸಿಬ್ಬಂದಿಯೋರ್ವರ ಹೊಲದಲ್ಲಿ ಹಣ ಹಾಗೂ ಆಭರಣವನ್ನು ಹೂತಿಡಲಾಗಿತ್ತು ಎನ್ನಲಾಗುತ್ತಿದೆ. ಇಡೀ ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಬಂದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ನೀಡಬೇಕಿದೆ.

ಬೆಳಗಾವಿ: BDCC ಬ್ಯಾಂಕ್ ಶಾಖೆಯಲ್ಲಿ ದರೋಡೆ; 5 ಕೋಟಿ ಹಣ, ಚಿನ್ನಾಭರಣ ಕದ್ದು ಪರಾರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button