Latest

ಪೊಲೀಸರ ಮನೆ ಮೇಲೆ ಕಳ್ಳರ ದಾಳಿ; ಹಿಡಿಯಲು ಬಂದ ASI ಮೇಲೆ ಫೈರಿಂಗ್

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಪೊಲೀಸರ ಮನೆ ಮೇಲೆ ಕಳ್ಳರು ದಾಳಿ ನಡೆಸಿದ್ದು, ತಡೆಯಲು ಬಂದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಇಲ್ಲಿನ ಪೇರಸಂದ್ರಗ್ರಾಮದ ಎ ಎಸ್ ಐ ನಾರಾಯಣ ಸ್ವಾಮಿ ಮನೆ ಮೇಲೆ ಕಳ್ಳರು ದಾಳಿ ನಡೆಸಿದ್ದಾರೆ. ಹಣ ದೋಚಲು ಯತ್ನಿಸುತ್ತಿದ್ದ ಕಳ್ಳರನ್ನು ಹಿಡಿಯಲು ನಾರಾಯಣಸ್ವಾಮಿ ಹಾಗೂ ಅವರ ಮಗ ಯತ್ನಿಸಿದ್ದಾರೆ. ಈ ವೇಳೆ ಕಳ್ಳರ ಗುಂಪು ಗುಂಡಿನ ದಾಳಿ ನಡೆಸಿದೆ.

ನಾರಾಯಣ ಸ್ವಾಮಿ ಹಾಗೂ ಮಗ ಶರತ್ ಗೆ ಗುಂಡೇಟು ತಗುಲಿದೆ. ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾರಾಯಣಸ್ವಾಮಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಎಎಸ್ ಐ ಕಾರ್ಯನಿರ್ವಹಿಸುತ್ತಿದ್ದರು. ಪೇರಸಂದ್ರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೆ ಕೊರೊನಾ ಅಟ್ಟಹಾಸ; ಲಾಕ್ ಡೌನ್ ಜಾರಿ

https://pragati.taskdun.com/world/chinacovid-increaselockdown/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button