
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಹಣ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ವಿಜಯಪುರ ಜಿಲ್ಲೆಯ ಡಿ ಎ ಆರ್ ನಲ್ಲಿ ಇರುವ ಎಎಸ್ಐ ಮತ್ತು ಪಿಎಸ್ಐ ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ.

ಸೂಚನೆ ನೀಡಿದ ಕೂಡಲೇ ಹಣ ವಸೂಲಿ ದಂಧೆಯಲ್ಲಿ ತೊಡಗಿರುವ ತಿಕೋಟ ಠಾಣೆಯ A S I ಎಮ್.ಎಸ್ ವಾಲಿಕರ್ ಹಾಗೂ ಪಿಎಸ್ಐ ಯು.ಬಿ.ಚಿಗೊರಳ್ಳಿ ಎ.ಆರ್ ಅವರನ್ನು ಅಮಾನತುಪಡಿಸಿ ಆದೇಶ ನೀಡಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿ ಸರಕು ಸಾಗಾಣೆ ಹೊತ್ತು ಸಂಚರಿಸುತ್ತಿರುವ ವಾಹನಗಳ ಬಳಿ ವಸೂಲಿಗೆ ನಿಂತಿದ್ದ ತಿಕೋಟಾ PSI ಹಾಗೂ ASI ಅವರನ್ನು ಅಮಾನತ್ತು ಗೊಳಿಸಲಾಗಿದೆ.