Latest

ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ ಅಮೆರಿಕದಲ್ಲಿ 10 ಲಕ್ಷ ಉದ್ಯೋಗಗಳಿಗೆ ಬೆಂಬಲ: ಪ್ರಧಾನಿ ಮೋದಿಗೆ ಬಿಡೆನ್ ಮಾತು

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಏರ್ ಇಂಡಿಯಾ-ಬೋಯಿಂಗ್ ಒಪ್ಪಂದವು ಯುಎಸ್‌ನಾದ್ಯಂತ 10 ಲಕ್ಷ ಉದ್ಯೋಗಗಳನ್ನು ಬೆಂಬಲಿಸಲಿದೆ ಎಂದು ಅಧ್ಯಕ್ಷ ಜೋ ಬಿಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಯು 220 ಬೋಯಿಂಗ್ ವಿಮಾನಗಳನ್ನು $34 ಶತಕೋಟಿ  ಬೆಲೆಯೊಂದಿಗೆ ಖರೀದಿಸಲಿದೆ. ಇಬ್ಬರು ನಾಯಕರು ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರಿಸಲು,  ಉಭಯ ದೇಶಗಳು ಮತ್ತು ಅವುಗಳ ಪಾಲುದಾರಿಕೆಯ ಆದ್ಯತೆಗಳ ಮೇಲೆ ಸಹಕಾರವನ್ನು ವಿಸ್ತರಿಸಲು ಬದ್ಧವಿರುವುದಾಗಿ ಶ್ವೇತಭವನ ಹೇಳಿದೆ.

ಈ ಉಪಕ್ರಮ ಉಭಯ ದೇಶಗಳ ಸರ್ಕಾರಗಳು, ವ್ಯವಹಾರಗಳು ಮತ್ತು ವಿಶ್ವವಿದ್ಯಾಲಯಗಳ ನಡುವಿನ ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ ಮತ್ತು ರಕ್ಷಣಾ ಕೈಗಾರಿಕಾ ಸಹಕಾರವನ್ನು ವಿಸ್ತರಿಸುವ ಗುರಿ ಹೊಂದಿದೆ ಎಂದು ಬಿಡೆನ್ ಹೇಳಿದ್ದಾರೆ.

ಬಿಡೆನ್ ಮತ್ತು ಮೋದಿ ಮೇ 2022 ರಲ್ಲಿ iCET ಯನ್ನು ಘೋಷಿಸಿದ್ದರು.

Home add -Advt

*ಕರ್ನಾಟಕ ಸೇರಿ 3 ರಾಜ್ಯ, 40 ಕಡೆಗಳಲ್ಲಿ NIA ದಾಳಿ*

https://pragati.taskdun.com/karnatakatamial-nadukerala3-statenia-raid/

RCB ಮಹಿಳಾ ಕ್ರಿಕೆಟ್ ತಂಡದ ಮಾರ್ಗದರ್ಶಕಿಯಾದ ಸಾನಿಯಾ ಮಿರ್ಜಾ

https://pragati.taskdun.com/sania-mirza-appointed-mentor-of-rcbs-womens-cricket-team/

*ರಾಜ್ಯ ಸರ್ಕಾರದ ಟೆಂಡರ್ ನಲ್ಲಿ ಭಾರಿ ಗೋಲ್ ಮಾಲ್; ಶಾಸಕರಿಂದಲೇ ಮಾಹಿತಿ ಬಹಿರಂಗ; ಡಿ.ಕೆ.ಶಿವಕುಮಾರ್ ಗಂಭೀರ ಆರೋಪ*

https://pragati.taskdun.com/state-govttender-golmald-k-shivakumar/

Related Articles

Back to top button