ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಿಂದ 5 ಜನರನ್ನು ಗಡಿಪಾರು ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು, ಮಾಳಮಾರುತಿ ಠಾಣೆ ವ್ಯಾಪ್ತಿಯ ಇಬ್ಬರು ಹಾಗೂ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಒಬ್ಬರನ್ನು ಗಡಿ ಪಾರು ಮಾಡಲಾಗಿದೆ.
ಮಾರ್ಕೆಟ್ ಠಾಣೆ ಎಸಿಪಿ ನಾರಾಯಣ ಬರಮನಿ ಅವರ ಶಿಫಾರಸ್ಸಿನಂತೆ ಡಿಸಿಪಿ ರವೀಂದ್ರ ಗಡಾದಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆಗಳಾದ ಮಟಕಾ, ಜೂಜಾಟ, ಅಕ್ರಮ ಸರಾಯಿ, ಕನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಮಾರ್ಕೇಟ್ ಉಪವಿಭಾಗದ ಮಾರ್ಕೆಟ್ ಠಾಣೆಯಲ್ಲಿ-02, ಮಾಳಮಾರುತಿ ಠಾಣೆಯಲ್ಲಿ-02 ಹಾಗೂ ಶಹಾಪೂರ ಠಾಣೆಯಲ್ಲಿ ಒಬ್ಬ ಆರೋಪಿತನ ಮೇಲೆ ಸಂಬಂಧಿಸಿದ ಠಾಣೆಗಳ ಠಾಣಾಧಿಕಾರಿಗಳ ವರದಿಯನ್ನು ಆಧರಿಸಿ ಮಾರ್ಕೆಟ್ ಎಸಿಪಿ ಎನ್.ವಿ ಬರಮನಿ, ಅವರ ಶಿಫಾರಸ್ಸಿನಂತೆ ಡಿಸಿಪಿ ರವೀಂದ್ರ ಗಡಾದಿ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಆರೋಪಿಗಳನ್ನು ಬಳ್ಳಾರಿ, ಕೊಪ್ಪಳ ವಿಜಯನಗರ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ. ಮಾರ್ಕೆಟ್ ಠಾಣೆ ವ್ಯಾಪ್ತಿಯ ಖಂಜರ ಗಲ್ಲಿಯ ಮಹಮ್ಮದರಫಿ ಮೋದಿನಸಾಬ ತಹಶೀಲ್ದಾರ (:68 ವರ್ಷ),
ಖಂಜರಗಲ್ಲಿಯ ಇಜಾರಅಹ್ಮದ ಮಹ್ಮದ ಇಸಾಕ್ ನೇಸರಿಕರ (48 ವರ್ಷ), ಮಾಳಮಾರುತಿ ಠಾಣೆ ವ್ಯಾಪ್ತಿಯ ಗ್ಯಾಂಗ್ ವಾಡಿಯ ಜಾನಿ ಜಯಪಾಲ ಲೊಂಡೆ (36 ವರ್ಷ), ಕಣಬರ್ಗಿ ಪಾಟೀಲ ಗಲ್ಲಿಯ ಬೈರಗೌಡ ಜ್ಯೋತಿಬಾ ಪಾಟೀಲ, (45 ವರ್ಷ) ಹಾಗೂ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಡೆಬಜಾರದ ನಿತಿನ ಪಾಂಡುರಂಗ ಪೇಡ್ನೇಕರ@ಪೆರನಕರ ( 50ವರ್ಷ) ಇವರನ್ನು ಗಡಿಪಾರು ಮಾಡಲಾಗಿದೆ.
ಮಟಕಾ ಜೂಜಾಟ, ಗಾಂಜಾ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
https://pragati.taskdun.com/blr-design-week-conferenceinaugurationcm-basaaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ